ವಸತಿನಿಲಯದಲ್ಲಿದ್ದ ಶ್ರೀಗಂಧ ಮರ ಕಳ್ಳತನ

14 gkp. 01
ಕಳ್ಳತನಕ್ಕೆ ಒಳಗಾದ ಗಂಧದ ಮರ
Published on

ಗೋಣಿಕೊಪ್ಪಲು: ನಿಟ್ಟೂರು ಕಾರ್ಮಾಡು ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ಮೆಟ್ರಿಕ್ ಪೂರ್ವ ಗಿರಿಜನ ಬಾಲಕಿಯರ ವಸತಿ ನಿಲಯದ ಆವರಣದಲ್ಲಿದ್ದ ಶ್ರೀಗಂಧ ಮರವನ್ನು ಸೋಮವಾರ ತಡರಾತ್ರಿಯಲ್ಲಿ ಖದೀಮರು ಕಡಿದು ಹಾಕಿ ಕದ್ದೊಯ್ದಿದ್ದಾರೆ.

ಸೋಮವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಸತಿನಿಲಯದ ಕ್ಯಾಮರಾವನ್ನು ಈ ಮರ ಕಾಣುವ ಹಾಗೆ ತಿರುಗಿಸಲು ಪ್ರಸ್ತಾಪಿಸಿದ್ದರು. ಈ ವಿಷಯ ತಿಳಿದ ಚೋರರು ತರಾತುರಿಯಲ್ಲಿ ಈ ಕೃತ್ಯವೆಸಗಿದ್ದಾರೆ. ಕಳೆದ ವಾರವಷ್ಟೇ ತಡರಾತ್ರಿ ನಿಟ್ಟೂರು ಮುಖ್ಯ ರಸ್ತೆಯ ಬದಿಯ ಮನೆಗಳಿಗೆ ನುಗ್ಗಿ ರಾತ್ರಿ ಕಳ್ಳತನ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net