ಪೊನ್ನಾನಿಯಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು

Published on

ಕುಂಬಳೆ: ಪೊನ್ನಾನಿಯಲ್ಲಿರುವ ಅನಿವಾಸಿಯೊಬ್ಬರ ಮನೆಗೆ ನುಗ್ಗಿ 350 ಪವನ್ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ಪೊನ್ನಾನಿಯ ಐಶ್ವರ್ಯ ಥಿಯೇಟರ್ ಬಳಿಯ ರಾಜೀವ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರ ಕುಟುಂಬ ದುಬೈನಲ್ಲಿ ವಾಸಿಸುತ್ತಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ರಾಜೀವ್ ತಮ್ಮ ಕುಟುಂಬ ಸಹಿತ ಗಲ್ಫ್‌ಗೆ ತೆರಳಿದ್ದು, ಹೋಗುವುದಕ್ಕೂ ಮುನ್ನ ಚಿನ್ನವನ್ನು ಮನೆಯ ಲಾಕರ್‌ಗಳಲ್ಲಿ ಇಡಲಾಗಿತ್ತು. ಕೆಲಸದವರು ಮನೆ ಸ್ವಚ್ಛಗೊಳಿಸಲು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ಶೀಘ್ರವೆ ಸಂಬಂಧಿಕರು ರಾಜೀವ್ ಅವರಿಗೆ ಮಾಹಿತಿ ನೀಡಿದ್ದಾರೆ.

ಮಲಪ್ಪುರಂ ಎಸ್ಪಿ, ತಿರೂರ್ ಡಿವೈಎಸ್ಪಿ ಸಹಿತ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಎರಡು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ವಿಚಾರ ತಿಳಿದುಬಂದಿದೆ. ಮಲಪ್ಪುರಂ ಎಸ್ಪಿ ನೇತೃತ್ವದಲ್ಲಿ ತಿರೂರ್ ಡಿವೈಎಸ್ಪಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net