ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಮುರುಗಮಲ್ಲಾ ಹೋಬಳಿ ನಂದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಡಿಗಿ ವಾರಹಳ್ಳಿಯ ಸರ್ವೇ ನಂ 20/1, 20/2 ಮತ್ತು 15/7ರಲ್ಲಿ 05 ಎಕರೆ ಜಮೀನಿಗೆ ಅಳವಡಿಸಿದ್ದ ಮುಳ್ಳು, ತಂತಿ ಪೆನ್ಸಿಂಗ್ ಬೇಲಿ ಹಾಗೂ ಮೆಸ್ನ್ನು ಕಳುವಾಗಿದೆ ಎಂದು ಚಿಂತಾಮಣಿ ನಗರದ ಎನ್.ಆರ್.ಬಡಾವಣೆ ನಿವಾಸಿ ಎನ್.ಶಿವಾನಂದ್ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ಸಲ್ಲಿಸಿದ್ದಾರೆ. ಮಾವಿನ ತೋಟದ ಸುತ್ತಲೂ ಕಲ್ಲುಗಳನ್ನು, ಮುಳ್ಳು, ತಂತಿ ಪೆನ್ಸಿಂಗ್ ಬೇಲಿ ಹಾಗೂ ಮೆಸ್ ಅಳವಡಿಸಲಾಗಿತ್ತು.