ಮನೆ, ಆಸ್ಪತ್ರೆ, ದೇಗುಲದಲ್ಲಿ ಕಳವು

Robbery
Published on

ಉಡುಪಿ: ಮನೆ, ಆಸ್ಪತ್ರೆ ಹಾಗೂ ದೇಗುಲದಲ್ಲಿ ಪ್ರತ್ಯೇಕ ಕಳವು ಪ್ರಕರಣ ನಡೆದಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ. ಉಡುಪಿಯ ಬೈಲೂರು ನಿವಾಸಿ ನಳಿನಿ ಪ್ರಭಾವತಿ (60) ಎಂಬುವರು ಮನೆಗೆ ಬೀಗ ಹಾಕಿ ಮಡಿಕೇರಿ, ಮೈಸೂರು ಕಡೆಗೆ ಪ್ರವಾಸಕ್ಕೆ ಹೋಗಿದ್ದರು. ಮೇ 11ರಂದು ಮನೆಯ ಮೇಲಿನ ಅಂತಸ್ತಿನ ಬಾಗಿಲ ಚಿಲಕ ಒಡೆದು ಒಳನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದಾಗಿ ತಂಗಿಯ ಮಗ ಅಭಿಷೇಕ್ ಎಂಬಾತ ಕರೆ ವಾಡಿ ತಿಳಿಸಿದ್ದು, ಮನೆಗೆ ಬಂದು ನೋಡಿದಾಗ 1.74 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 3 ಸಾವಿರ ರೂ. ನಗದು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಂಸಿಯಲ್ಲಿ ಡರ್ಮೆಟಾಲಜಿ ಹೊರರೋಗಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಣಿಪಾಲ ಮಾಧವನಗರದ ಡಾ.ಪ್ರಾಂಜಲಿ ಬಿ. ಶಿರ್ಸಾಟ್ ಎಂಬುವರ ಲ್ಯಾಪ್‌ಟಾಪ್ ಕಳವಾಗಿದೆ. ಓಲ್ಡ್ ಕಾರ್ಡಿಯೋ ಒಪಿಡಿ ಕ್ಲಾಸ್ ರೂಮ್‌ನಲ್ಲಿ 75 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ಇಟ್ಟು, ಮಧ್ಯಾಹ್ನ ಕರ್ತವ್ಯ ಮುಗಿಸಿ ಬಂದು ನೋಡಿದಾಗ ಲ್ಯಾಪ್‌ಟಾಪ್ ನಾಪತ್ತೆಯಾಗಿತ್ತು ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣಿಕೆ ಹಣ ಕೊಳ್ಳೆ

ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ಬೈಲೂರಿನಲ್ಲಿರುವ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಮೇ 11ರಂದು ಬಾಗಿಲು ಮುರಿದು, ಗರ್ಭಗುಡಿಯ ಒಳಗೆ ಇದ್ದ ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಅಂದಾಜು 50 ಸಾವಿರ ರೂ. ಕಳವು ಮಾಡಲಾಗಿದೆ. ಸದಾನಂದ ಎಂಬುವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net