ಬೈಕ್‌ಗೆ ಸ್ಕೂಟರ್ ಡಿಕ್ಕಿ, ಸವಾರ ಗಂಭೀರ

accident-15
Published on


ಮೂಲ್ಕಿ: ಕಿನ್ನಿಗೋಳಿ-ಮೂಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಅಮೃತಾನಂದಮಯಿ ನಗರ ಕ್ರಾಸ್ ಬಳಿ ಬೈಕ್‌ಗೆ ಸ್ಕೂಟರ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಗಾಯಗೊಂಡವರನ್ನು ಸ್ಥಳೀಯ ನಿವಾಸಿ ನೆಲ್ಸನ್ ಕರ್ಕಡ (51) ಎಂದು ಗುರುತಿಸಲಾಗಿದೆ. ಗಾಯಾಳು ನೆಲ್ಸನ್ ಕರ್ಕಡ ಮೂಲ್ಕಿಯಿಂದ ಕಾರ್ನಾಡ್ ಅಮೃತಾನಂದಮಯಿ ನಗರ ಕ್ರಾಸ್ ಬಳಿ ತಮ್ಮ ಬೈಕ್ ಹೆದ್ದಾರಿ ಬಲಬದಿಗೆ ಕ್ರಾಸ್ ಮಾಡುತ್ತಿದ್ದಾಗ ಹಿಂದಿನಿಂದ ಅತಿವೇಗದಲ್ಲಿ ಬಂದ ಸ್ಕೂಟರ್ ಸವಾರ ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದಿಂದ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಕೂಟರ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net