ಮನೆಗಳಿಂದ ಕಳವು, ಆರೋಪಿ ಬಂಧನ

ramesh
ರಮೇಶನ್
Published on

ಕಾಸರಗೋಡು: ನಗರದ ಬೀರಂತಬೈಲ್ ನಿವಾಸಿ ಆರ್.ಲಕ್ಷ್ಮೀನಾರಾಯಣ ಎಂಬುವರ ಮನೆಯಿಂದ 2ಸಾವಿರ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂಲತಃ ಕೊಡಗು ಜಿಲ್ಲೆ ಅಮ್ಮತ್ತಿ ನಿವಾಸಿ, ಪ್ರಸಕ್ತ ಪಾಲಕ್ಕಾಡಿನ ತಂದೆ ಮನೆಯಲ್ಲಿ ವಾಸಿಸುತ್ತಿರುವ ರಮೇಶನ್ ಅಲಿಯಾಸ್ ಉಡುಂಬು ರಮೇಶನ್ ಎಂಬಾತನನ್ನು ಪಾಲಕ್ಕಾಡ್ ಪೊಲೀಸರ ನೆರವಿನೊಂದಿಗೆ ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೀಗಹಾಕಿರುವ ಮನೆಗಳನ್ನು ಕೇಂದ್ರೀಕರಿಸಿ ಕಳವು ನಡೆಸುವಲ್ಲಿ ನಿಪುಣನಾಗಿದ್ದ ಈತ ಕೇರಳ, ಕರ್ನಾಟಕದ ನೂರಕ್ಕೂ ಹೆಚ್ಚು ಮನೆಗಳಿಂದ ಕಳವು ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಏ.18ರಂದು ಲಕ್ಷ್ಮೀನಾರಾಯಣ ಅವರ ಮನೆಯಿಂದ ಕಳವು ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net