ಹಾಡ ಹಗಲೇ ಮನೆಯಲ್ಲಿ ಕಳ್ಳತನ

10blrp1.
Published on

 ಬೇಲೂರು: ಪಟ್ಟಣದ ಹೊರ ವಲಯದಲ್ಲಿರುವ ಮನೆಯೊಂದರಲ್ಲಿ ಮಂಗಳವಾರ ಹಾಡಹಗಲೇ ಕಳ್ಳತನ ನಡೆದಿದೆ. ಪಟ್ಟಣದ ಎನ್.ನಿಡಗೋಡು-ಚಿನ್ನೇನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಕೇಶವಮೂರ್ತಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಎಂದಿನಂತೆ ಕೇಶವಮೂರ್ತಿ ಮನೆ ಬಾಗಿಲಿಗೆ ಬೀಗ ಹಾಕಿ ಪೇಯಿಂಟ್ ಕೆಲಸಕ್ಕೆ ತೆರಳಿದ್ದಾರೆ. ಆದರೆ ಬೀಗ ಹಾಕಿರುವ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಕಳ್ಳರು ಮನೆ ಮೇಲಿನ ಹೆಂಚು ತೆಗೆದು ಒಳ ಹೋಗಿದ್ದಾರೆ. ಎರಡು ಗ್ಯಾಸ್ ಸಿಲಿಂಡರ್, ಸ್ಟೌ, ಅಡುಗೆ ಪಾತ್ರೆಗಳು, ನೀರಿನ ಹಂಡೆ, ಮಿಕ್ಸಿ ಸೇರಿದಂತೆ ಅಡುಗೆ ಸಾಮಗ್ರಿಗಳು ಜತೆಗೆ ಮನೆಯಲ್ಲಿಟ್ಟಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಕೇಶವಮೂರ್ತಿ ಅವರು ಮನೆಯೊಳಗೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ತಕ್ಷಣವೇ ಬೇಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಉಮೇಶ್, ತಾಂಡವೇಶ್ವರ, ಕೇಶವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net