ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

arrest nagma
Published on

ಬೆಂಗಳೂರು: ಯಾರೂ ಇಲ್ಲದ ಮನೆಗಳೇ ಈಕೆಯ ಟಾರ್ಗೆಟ್​. ಕಳ್ಳರ ಗ್ಯಾಂಗ್​ವೊಂದನ್ನು ಕಟ್ಟಿಕೊಂಡಿದ್ದ ಈಕೆಯೇ ಅದರ ಲೀಡರ್​. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಚಂದ್ರಾಲೇಔಟ್ ಪೊಲೀಸರು ನಟೋರಿಯಸ್ ನಗ್ಮಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆ ಬೀಗ ಮುರಿದು ನಗ್ಮಾ ಗ್ಯಾಂಗ್​ ಕಳ್ಳತನ ಮಾಡುತ್ತಿತ್ತು. ಕದ್ದ ಚಿನ್ನಾಭರಣವನ್ನು ಹಚರರು ನಗ್ಮಾಳಿಗೆ ಕೊಡುತ್ತಿದ್ದರು. ಚಿನ್ನಾಭರಣಗಳನ್ನ ಮಾರಾಟ ಮಾಡುವಲ್ಲಿ ನಗ್ಮಾ ನಿಸ್ಸಿಮಳಾಗಿದ್ದಳು.

ಇತ್ತೀಚಿಗೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನವಾಗಿತ್ತು. ಈ ಸಂಬಂದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ನಯಾಜ್ ಖಾನ್ ಮತ್ತು ಅಪ್ಸರ್ ಅಹಮ್ಮದ್ ಎಂಬುವರನ್ನು ಬಂಧಿಸಿದ್ದರು. ಅವರಿಂದ 60 ಗ್ರಾಂ ತೂಕದ ಚಿನ್ನದ ಗಟ್ಟಿ ವಶ ಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಆರೋಪಿಗಳು ನಗ್ಮಾಳ ಹೆಸರ ಬಾಯಿಬಿಟ್ಟಿದ್ದರು.

ಆರೋಪಿಗಳು ಕೊಟ್ಟ ಸುಳಿವಿನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು ನಗ್ಮಾಳನ್ನ ಬಂಧಿಸುತ್ತಿದ್ದಂತೆ ಮತ್ತೆ ಐದು ಪ್ರಕರಣ ಬೆಳಕಿಗೆ ಬಂದಿವೆ. ಸದ್ಯ ಬಂಧಿತ ಆರೋಪಿಗಳಿಂದ 6.46 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.

ಕಳ್ಳತನ ಮಾಡಿ ತಂದ ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ನಗ್ಮಾ ಅವುಗಳನ್ನು ಒಡವೆ ಅಂಗಡಿಗಳಿಗೆ ಮಾರಿ ಹಣ ಪಡೆಯುತ್ತಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ. ಈ ನಟೋರಿಯಸ್​ ಗ್ಯಾಂಗ್​ ಕಳ್ಳತನ ಮಾಡಿದ ಕಡೆ ಸ್ಥಳೀಯರೂ ತಮ್ಮ ಮನೆಗಳಿಗೆ ಬೀಗ ಹಾಕಿ ಹೊರ ಹೋಗಲು ಭಯಪಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net