ಚಿಂತಾಮಣಿ: ತಾಲೂಕಿನ ಚಿಲಕಲನೇರ್ಪು ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕೆಂಚಾರ್ಲಹಳ್ಳಿ ಪಿಎಸ್ಐ ಜಗದೀಶ್ ತಂಡ ಬಂಧಿಸಿದೆ. ಅದೇ ಗ್ರಾಮದ ಶ್ರೀನಾಥ್ (27)ಆರೋಪಿ. ಮನೆ ಮಾಲೀಕ ಸುಬ್ಬ ಪತ್ನಿ ವಾಣಿ ಆ.4ರಂದು ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ಮನೆಯ ಸಜ್ಜಾ ಮೇಲೆ ಇಟ್ಟು, ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ 7ಗಂಟೆಗೆ ವಾಪಸ್ ಬಂದಾಗ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ 5 ಸಾವಿರ ರೂ.ಕಳ್ಳತನವಾಗಿದ್ದು, ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಅ.5ರಂದು ಪ್ರಕರಣ ದಾಖಲಾಗಿತ್ತು. ಕೆಂಚಾರ್ಲಹಳ್ಳಿ ಪ್ರಭಾರ್ ಪೊಲೀಸ್ ಇನ್ಸ್ಪೆಕ್ಟರ್ ಪಿ.ಆರ್.ಜನಾರ್ದನ ನೇತೃತ್ವದಲ್ಲಿ ಪಿಎಸ್ಐ ಆರ್.ಜಗದೀಶ್ರೆಡ್ಡಿ ಅವರು ಅದೇ ಗ್ರಾಮದ ಶ್ರೀನಾಥನನ್ನು ವಶಕ್ಕೆ ಪಡೆದು, ಮಾಲನ್ನು ವಶಕ್ಕೆ ಪಡೆದಿದ್ದಾರೆ.