

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನದ ಮನೆಯ ಬಾಗಿಲು ಒಡೆದು ಕಪಾಟಿನಲ್ಲಿಟ್ಟಿದ್ದ ಒಂದೂಕಾಲು ಪವನ್ ಚಿನ್ನ ಹಾಗೂ 25 ಸಾವಿರ ರೂ. ಕಳವುಗೈಯಲಾಗಿದೆ. ಬೋವಿಕ್ಕಾನ ತೇಜಸ್ ಕಾಲನಿ ನಿವಾಸಿ ಕಿರಣ್ ಕುಮಾರ್ ಎಂಬುವರ ಪತ್ನಿ ಶ್ರೀವಿದ್ಯಾ ನೀಡಿದ ದೂರಿನ ಮೇರೆಗೆ ಕೇಸು ದಾಖಲಾಗಿದೆ. ಪತಿ ಕಿರಣ್‌ಕುಮಾರ್ ಅಸೌಖ್ಯದಿಂದ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಪತಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದು, ಅವರ ಪುತ್ರ ಪ್ಲಸ್‌ಟು ವಿದ್ಯಾರ್ಥಿ ಸಂಬಂಧಿಕರ ಮನೆಯಲ್ಲಿದ್ದ ಸಂದರ್ಭ ಕಳವು ನಡೆದಿದೆ. ಮೇ 11ರಂದು ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ನೆರೆಮನೆಯವರು ಶ್ರೀವಿದ್ಯಾ ಅವರಿಗೆ ಮಾಹಿತಿ ನೀಡಿದ್ದರು.