ಮನೆಯಿಂದ ಚಿನ್ನಾಭರಣ, ನಗದು ಕಳವು

house
ಮನೆಯೊಳಗೆ ಪ್ರವೇಶಿಸಿಲು ಕಳ್ಳರು ಮನೆಯ ಕಿಟಕಿಯ ಸರಳನ್ನು ಯಾವುದೋ ಸಾಧನದಿಂದ ಮೀಟಿ ಮುರಿದು ಬಗ್ಗಿಸಿರುವುದು.
Published on

ಪುತ್ತೂರು ಗ್ರಾಮಾಂತರ: ಮನೆಯ ಕಿಟಕಿಯ ಸರಳನ್ನು ಬಾಗಿಸಿ ದಾರಿ ಮಾಡಿಕೊಂಡು ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ನಡೆದಿದೆ.

ಸರ್ವೆ ಗ್ರಾಮದ ಕಾಡಬಾಗಿಲು ನಿವಾಸಿ ಸಾರಮ್ಮ ಅವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ತಿಳಿದುಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಳ್ಳರು, ಬಾಗಿಲು ಮುರಿಯುವ ಪ್ರಯತ್ನದಲ್ಲಿ ವಿಫಲಗೊಂಡಿದ್ದಾರೆ. ಎರಡು ಕಿಟಕಿಗಳ ಸರಳನ್ನು ಬಗ್ಗಿಸಿ ಒಳನುಗ್ಗಿ 3 ಪವನ್ ಚಿನ್ನಾಭರಣ, 35 ಸಾವಿರ ರೂ. ನಗದು ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್‌ಐ ಸುಷ್ಮಾ ಜಿ.ಭಂಡಾರಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net