

ಕೆ.ಎಂ.ದೊಡ್ಡಿ: ಧಾರಾವಾಹಿಗಳ ಪ್ರಭಾವದಿಂದ ರಂಗಕಲೆ ನಶಿಸುತ್ತಿವೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸದಸ್ಯ ಕೆ.ಎಂ.ರವಿ ವಿಷಾದ ವ್ಯಕ್ತಪಡಿಸಿದರು.
ಸಮೀಪದ ಮೆಣಸಗೆರೆಯಲ್ಲಿ ಪಿತೃಪಕ್ಷದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬುಧವಾರ ಆಯೋಜಿಸಿದ್ದ ಅಣ್ಣನ ‘ಅರಮನೆ’ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ರಂಗಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಹಳ್ಳಿಯ ಜಾತ್ರೆ ಹಾಗೂ ಉತ್ಸವಗಳಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗುತ್ತಿತ್ತು, ಆದರೆ ಇಂದು ಮರೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಪೀಳಿಗೆಗೆ ನಾಟಕಗಳ ಮೇಲೆ ಅಭಿರುಚಿ ಇಲ್ಲದೇ ಇರುವುದು ಬೇಸರ ಸಂಗತಿ, ರಂಗಕಲೆಗಳನ್ನು ಮೈಗೂಡಿಸಿಕೊಳ್ಳಬೇಕು, ರಂಗಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಕೆ.ಎಂ. ದೊಡ್ಡಿಯಲ್ಲಿ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ನಾಟಕ ಪ್ರದರ್ಶಿಸುವ ಮೂಲಕ ಕಲೆಯನ್ನು ಉಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಎ ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಮೆಣಸಗೆರೆ ಪ್ರಕಾಶ್, ಮುಖಂಡರಾದ ಮಧುಕುಮಾರ್, ನಟರಾಜು. ಸತೀಶ್, ಅಣ್ಣೂರು ಮನೋಹರ್ ಮತ್ತಿತರರಿದ್ದರು.