

ಗೌರಿಬಿದನೂರು: ನಾಟಕ, ಕಲೆ, ಸಂಸತಿ, ಸಾಹಿತ್ಯಗಳು ಜೀವನದ ನೋವುಗಳನ್ನು ಮರೆಸಿ ಹೊಸ ಜೀವನದ ಮುನ್ನೋಟಕ್ಕೆ ಸಹಕಾರಿಯಾಗಿವೆ ಎಂದು ನಿವೃತ್ತ ಶಿಕ ಎಲ್.ನಾಗರಾಜು ಹೇಳಿದರು. ಇಡಗೂರು ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸತಿಕ ಸಂ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ಇಡಗೂರು ರುದ್ರ ಗವಿ ರಂಗಮಂದಿರದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಜೀವನ ಭರಾಟೆಯಲ್ಲಿ ನಮ್ಮ ಪರಂಪರೆ ಗ್ರಾಮೀಣ ಜನರ ಬದುಕು ಮತ್ತು ಸಂಬಂಧಗಳ ಸಹೋದರತ್ವ ಗಟ್ಟಿಗೊಳಿಸುವ ಶಕ್ತಿ ರಂಗಭೂಮಿಗಿದೆ ಎಂದರು.
ಗ್ರಾಪಂ ಸದಸ್ಯ ಜಿ.ಸೋಮಯ್ಯ ಮಾತನಾಡಿ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜೀವನ ಸಂಪ್ರದಾಯಗಳು ನೀತಿ ಭಾಗಗಳು ಪ್ರಮುಖ ಸ್ಥಾನ ಪಡೆದಿವೆ. ರಂಗಭೂಮಿ ಪರಂಪರೆ ಮತ್ತು ತಲೆಮಾರುಗಳ ಜನಜೀವನ ಸಂಸತಿ ಬಹುತ್ವವಾಗಿದೆ. ರಂಗಭೂಮಿ ಕಲಾವಿದ ಬಣ್ಣ ಹಚ್ಚಿ ಸ್ವಂತ ನೋವುಗಳನ್ನು ಮರೆತು ಇತರರಿಗೆ ಸಂತೋಷ ನೀಡುತ್ತಾನೆ. ಇಡಗೂರು ಗ್ರಾಮ ಶತಮಾನದ ರಂಗಭೂಮಿ ಪರಂಪರೆ ಹೊಂದಿದೆ ಎಂದರು.
ನಿವೃತ್ತ ಪಿಡಿಒ ಎನ್.ಉಮಾಶಂಕರ್ ಮಾತನಾಡಿ, ರಂಗಭೂಮಿ ಪ್ರಕಾರ ಜನಸಮುದಾಯಗಳ ಭ್ರಾತೃತ್ವದ ಸಂಕೇತ. ಬಳ್ಳಾರಿಯ ರಾತ್ರಿ ರಂಗ ಸಂಸ್ಥೆ ಹೊಸ ತಲೆಮಾರಿನ ಯುವ ಸಮುದಾಯದ ಮೂಲಕ ಹೊಸ ರಂಗ ಪ್ರಯೋಗಗಳನ್ನು ತಿರುಗಾಟದ ಮೂಲಕ ಜನ ಸಮುದಾಯಗಳಿಗೆ ಸಂಸತಿ ಪರಂಪರೆಯನ್ನು ಪರಿಚಯಿಸುತ್ತಿರುವುದು ಶ್ಲಾನೀಯ ಎಂದರು.
ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸತಿಕ ಸಂಸ್ಥೆಯ ವೈ.ಟಿ.ಪ್ರಸನ್ನ ಕುಮಾರ್, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಎನ್.ಪ್ರಸನ್ನ ಕುಮಾರ್, ಗ್ರಂಥಾಲಯ ಮೇಲ್ವಿಚಾರಕ ನಂಜುಂಡಪ್ಪ ಹಾಜರಿದ್ದರು. ಧಾತ್ರಿ ರಂಗ ಸಂಸ್ಥೆ ತಿರುಗಾಟದ ತಂಡ ನಾಟಕ ಪ್ರದರ್ಶಿಸಿತು.