ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರು

16KMD-1
ಕೆ.ಎಂ.ದೊಡ್ಡಿಯ ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 10 ದಿನಗಳ ಕಾಲ ನಡೆಯುವ ಗ್ರಾಮೀಣ ನಾಟಕೋತ್ಸವದಲ್ಲಿ ತೈಲೂರು ಸಿದ್ದರಾಜು ಅವರಿಗೆ ಬಂಗಾರದ ಕಡಗ ತೊಡಿಸಿ, ಪತ್ನಿ ಪವಿತ್ರಾ ಅವರಿಗೆ ಬಂಗಾರದ ಸರ ಹಾಕಿ ಅಭಿನಂದಿಸಲಾಯಿತು.
Published on

ಕೆ.ಎಂ.ದೊಡ್ಡಿ: ರಂಗಭೂಮಿ ಕಲಾವಿದರು ಸಂಕಷ್ಟದ ಜೀವನ ನಡೆಸುತ್ತಿದ್ದು, ಅವರ ಆರೋಗ್ಯ ದೃಷ್ಟಿಯಿಂದ ಅಪಘಾತ ಮತ್ತು ಆರೋಗ್ಯ ವಿಮೆ ಮಾಡಿಸಲು ನೆರವು ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಭರವಸೆ ನೀಡಿದರು.

ಶನಿವಾರ ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 10 ದಿನಗಳ ಕಾಲ ನಡೆಯುವ ಗ್ರಾಮೀಣ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಮೆಯ ಮೊದಲ ಕಂತಿನ ಹಣ ಪಾವತಿಸುವುದಾಗಿ ಭರವಸೆ ನೀಡಿದರು.

ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಮರೀಚಿಕೆಯಾಗಿದೆ. ಕಲಾವಿದರ ಬದುಕು ಸಾಕಷ್ಟು ಕಷ್ಟದಲ್ಲಿದ್ದರೂ ಇತರರನ್ನು ರಂಜಿಸಿ ಮನರಂಜನೆ ನೀಡುತ್ತಿದ್ದಾರೆ. ಹಾಗಾಗಿ ಕಲಾವಿದರ ಹೆಸರಿನ ಪಟ್ಟಿ ನೀಡಿದರೆ ಆರೋಗ್ಯ ವಿಮೆಯ ಮೊದಲ ಕಂತಿನ ಹಣವನ್ನು ಪಾವತಿ ಮಾಡಿಕೊಡುವುದಾಗಿ ತಿಳಿಸಿದರು.

ಚಿಕ್ಕರಸಿನಕೆರೆ ಹೋಬಳಿ ಸೇರಿದಂತೆ ಮದ್ದೂರು ತಾಲೂಕಿನಲ್ಲಿ ಅನೇಕ ಸಂಘಗಳನ್ನು ಮಾಡಿಕೊಂಡಿದ್ದು ಅದರಲ್ಲೂ ಸಹ ಉತ್ತಮ ಕಲಾವಿದರಿಂದ್ದು ಒಬ್ಬರನ್ನು ಮತ್ತೊಬ್ಬರು ಮೀರಿಸುವ ರೀತಿ ಅಭಿನಸುವ ಮೂಲಕ ರಂಗಕಲೆಗಳಿಗೆ ಗೌರವ ನೀಡುತ್ತ ಅವುಗಳನ್ನು ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಗ್ರಾಮೀಣ ಪ್ರದೇಶದ ಕಲಾವಿದರು ಮತ್ತು ಜನರಿಂದ ಮಾತ್ರ ರಂಗಭೂಮಿ ನಾಟಕಗಳನ್ನು ಉಳಿಸಲು ರಂಗಭೂಮಿ ನಾಟಕ ಆಗಾಗ ನಡೆದರೆ ಹಲವು ರಂಗಭೂಮಿ ಕಲಾವಿದರ ಕುಟುಂಬಗಳು ಉಳಿಯುತ್ತವೆ. ಹೀಗಾಗಿ ರಂಗಕಲೆ ಪೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಪ್ರಸ್ತುತ ದಿನದಲ್ಲಿ ಟಿವಿಯಲ್ಲಿ ಬರುವಂತ ಧಾರಾವಾಹಿಗಳಿಂದ ನಮ್ಮ ಸಂಸ್ಕೃತಿ ನಾಶಗೊಳ್ಳುತ್ತಿದೆ. ಯುವ ಸಮುದಾಯ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿ ಮೊಬೈಲ್‌ಗಳಿಗೆ ದಾಸರಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಗ್ರಾಮೀಣ ನಾಟಕಗಳು ನಶಿಸುತ್ತಿದ್ದು ಮೊಬೈಲ್ ಮತ್ತು ಧಾರಾವಾಹಿಗಳಿಂದ ರಂಗಕಲೆಗಳು ಅವನತಿಯ ಅಂಚಿಗೆ ತಲುಪುತ್ತಿರುವುದು ನಿಜಕ್ಕೂ ವಿಷಾದನೀಯ ಎಂದರು.

ಸನ್ಮಾನ: ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರು ಮತ್ತು ಅಭಿಮಾನಿಗಳು ತೈಲೂರು ಸಿದ್ದರಾಜು ಅವರಿಗೆ ಬಂಗಾರದ ಕಡಗ ತೊಡಿಸಿ ಮೈಸೂರು ಪೇಟ ತೊಡಿಸಿ ನೆನಪಿನ ಕಾಣಿಕೆ ನೀಡಿ, ಪತ್ನಿ ಪವಿತ್ರಾ ಅವರಿಗೆ ಬಂಗಾರದ ಸರ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು.

ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಭರತೇಶ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಸುಮುಖ ಸೇವಾ ಟ್ರಸ್ಟ್ ಅಧ್ಯಕ್ಷ ತೈಲೂರು ರಘು, ವಿಶ್ವಕರ್ಮ ಸಂಘದ ಅಧ್ಯಕ್ಷೆ ಪವಿತ್ರಾ ಪ್ರಭಾಕರ್, ಮೈಸೂರು ರಾಮಪ್ಪ, ದೊಡ್ಡರಸಿನಕೆರೆ ಮಂಚೇಗೌಡ, ಗ್ರಾಪಂ ಸದಸ್ಯ ಕೆ.ಟಿ.ಶ್ರೀನಿವಾಸ್, ವಿನಯ್‌ಹೊನ್ನೇಗೌಡ, ಗೊಲ್ಲರದೊಡ್ಡಿ ಶಿವಲಿಂಗಯ್ಯ, ತಿಪ್ಪೂರು ಅಂದಾನಿ, ದೇವರಹಳ್ಳಿ ದೇವರಾಜು, ಬೀರೇಶ, ಪುಟ್ಟರಾಜು, ಚಿಕ್ಕಬೋರೇಗೌಡ, ಕಾಡುಕೊತ್ತನಹಳ್ಳಿ ರಾಜು, ಪ್ರಕಾಶಚಾರಿ, ಬುಲೆಟ್ ಬಸವರಾಜು, ಮಲ್ಲೇಶ್, ರಘುವೆಂಕಟೇಗೌಡ, ಎ.ಎನ್.ಮಹೇಶ್, ಗಜೇಂದ್ರ, ಬಿ.ಕೆ.ಜಯರಾಮು. ಕರಿಯಪ್ಪ, ಮೈಸೂರು ವಿಶ್ವಕರ್ಮ ಅಧ್ಯಕ್ಷ ರಾಜಣ್ಣ, ಸೇರಿದಂತೆ ರಂಗಭೂಮಿ ಕಲಾವಿದರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net