ಅಣ್ಣಿಗೇರಿಯಲ್ಲಿ ರಿವಾಯತ್​ಗೆ ಹೆಜ್ಜೆ ಹಾಕಿದ ಯುವಕರು

ANG MOHARAM
Published on

ಅಣ್ಣಿಗೇರಿ: ಧರ್ಮಗಳ ಮಧ್ಯೆ ಸಾಮರಸ್ಯ ಬೆಸೆಯುವ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.


ಸರ್ವಧರ್ಮದ ಜನರು ಮಸೀದಿಗೆ ತೆರಳಿ, ಆಲೈ ದೇವರ ಕೃಪೆಗೆ ಪಾತ್ರರಾದರು. ದೇವರನ್ನು (ಪಾಂಜಾ) ಹೊರುವ ಯುವಕರು, ಯಜಮಾನರು ಹಿರಿಯರ ಮಾರ್ಗದರ್ಶನದಲ್ಲಿ ದೇವರ ಎದುರು ಬಳ್ಳಿ ಕಟ್ಟೆ ಹಾಡುವ ರಿವಾಯತ್​ಗೆ ಹೆಜ್ಜೆ ಹಾಕಿದರು.


ನಗರದ ಚನ್ನಮ್ಮ ವೃತ್ತದ ಬಯಲಿನಲ್ಲಿ ಜುಮ್ಮಾ ಮಸೀದಿ, ಹಳೇ ಮಸೀದಿ, ಚಾಂಚಾವಲಿ ದರ್ಗಾ, ಹೊಸಪೇಟೆ ಓಣಿ, ಕುರಬಗೇರಿ ಓಣಿ ಹಾಗೂ ಇತರ ಓಣಿಯ ಪಾಂಜಾಗಳು ಹಾಗೂ ಅಳಿಯ ದೇವರು ಎದುರಾದವು.

ಇಲ್ಲಿಂದ ಎಲ್ಲ ದೇವರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ರಾತ್ರಿ ಹಳೇ ಮಸೂತಿ ಬಾವಿಗೆ ತೆರಳಿದವು. ಅಲ್ಲಿ ವಿಧಿ-ವಿಧಾನ ನೆರವೇರಿಸುವ ಮೂಲಕ ಮೊಹರಂ ಹಬ್ಬ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net