ರಸ್ತೆ ಗುಂಡಿ ಮುಚ್ಚಿದ ಯುವ ಪಡೆ

Mul_Road
Published on

ಮೂಲ್ಕಿ: ಬಹಳ ದಿನಗಳಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿರುವ ಮೂಲ್ಕಿ ರಾಜ್ಯ ಹೆದ್ದಾರಿಯ ಸರ್ಕಾರಿ ಆಸ್ಪತ್ರೆ ಎದುರು ಹಾಗೂ ಕಾರ್ನಾಡ್ ಗೇರುಕಟ್ಟೆ ರಸ್ತೆಯಲ್ಲಿನ ಗುಂಡಿಗಳನ್ನು ಮೂಲ್ಕಿ ಯುವ ಪಡೆ ಕಾಂಕ್ರೀಟ್ ಹಾಕಿ ಮುಚ್ಚಿದೆ.

ಸುರಭಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಾಲೀಕ ಜೋನ್ ಕ್ವಾಡ್ರಸ್ ಪ್ರಾಯೋಜಕತ್ವದಲ್ಲಿ ಸುರಭಿ ಇಲೆಕ್ಟ್ರಾನಿಕ್ಸ್‌ನ ಮ್ಯಾನೇಜರ್ ಸುಪ್ರೀತ ಪುನರೂರ್, ಯುವ ಪಡೆಯ ಸಂಪತ್ ಉಚ್ಚಿಲ, ಸಚಿನ್, ನರೇಶ್, ಮೇಸ್ತ್ರಿಗಳಾದ ಪುನರೂರಿನ ಶಶಿಧರ್ ಹಾಗೂ ವಿಶ್ವನಾಥ್ ಸೇರಿ ಹೊಂಡಗಳನ್ನು ಮುಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net