

ಕಾರವಾರ: ಅಣ್ಣನ ಸಾವಿನಿಂದ ಅಘಾತಗೊಂಡು ಅಸ್ವಸ್ಥಳಾದ ಸಹೋದರಿ ಮೃತಪಟ್ಟ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ನಗರದ ಹೈಚರ್ಚ್ ರಸ್ತೆಯ ನಿವಾಸಿ ಸ್ಮಿತಾ ನಾಯ್ಕ (51) ಮೃತರು.
ಒಂದು ದಿನದ ಹಿಂದೆ ಅವರ ಸಹೋದರ, ಕಾರವಾರ ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಗುರುದಾಸ ಬಾಂದೇಕರ್ ಆರ್‌ಟಿಒ ಕಚೇರಿಯ ಎದುರು ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಅಣ್ಣನ ಸಾವಿನಿಂದ ಕುಗ್ಗಿ, ಕುಸಿದು ಬಿದ್ದ ಸ್ಮಿತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಸ್ಮಿತಾ ನಾಯ್ಕ ಲೋಕಮಾನ್ಯ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದರು. ತಿಂಗಳ ಹಿಂದಷ್ಟೇ ರಾಜೀನಾಮೆ ನೀಡಿ ಕಾರವಾರ ಅರ್ಬನ್ ಬ್ಯಾಂಕ್‌ಗೆ ಸೇರಿದ್ದರು.