ವಿವೇಕ ಸಂಪದದ ಕಾರ್ಯ ಅಭಿನಂದನೀಯ: ಕೆ.ಭುವನಾಭಿರಾಮ ಉಡುಪ ಶ್ಲಾಘನೆ

Mul_Viveka-sampada
Published on

ಮೂಲ್ಕಿ: ಧಾರ್ಮಿಕ ಚಿಂತನೆ ಜತೆಗೆ ಸಾವಾಜಿಕ ಬಂಧುತ್ವವನ್ನು ಸರಳ ಶಬ್ದಗಳಲ್ಲಿ ಗ್ರಾಮೀಣ ಜನಸಾವಾನ್ಯರು ಅರ್ಥೈಸುವಂತೆ ವಾಡುವ ವಿವೇಕ ಸಂಪದದ ಕಾರ್ಯ ಅಭಿನಂದನೀಯ ಎಂದು ಧಾರ್ಮಿಕ ಪರಿಷತ್ ವಾಜಿ ಸದಸ್ಯ ಕೆ.ಭುವನಾಭಿರಾಮ ಉಡುಪ ಹೇಳಿದರು.

ಮೂಲ್ಕಿ ವಿವೇಕ ಜಾಗೃತ ಬಳಗದ ವತಿಯಿಂದ ಆಯೋಜಿಸಲಾದ ವಿವೇಕ ಸಂಪದ ಸವಾವೇಶದಲ್ಲಿ ಮುಖ್ಯ ಅತಿಥಿಯಾಗಿ ವಾತನಾಡಿದರು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿವೈನ್ ಪಾರ್ಕಿನ ಅಧಿಕಾರಿ ಯಶವಂತ ಸುಳ್ಯ ದಿಕ್ಸೂಚಿ ಭಾಷಣ ವಾಡಿದರು. ಬಳಗದ ಅಧ್ಯಕ್ಷ ಶ್ರೀನಿವಾಸ್ ಶ್ರೀಯಾನ್ ಉಪಸ್ಥಿತರಿದ್ದರು. ಸುನಂದಾ ಗಣೇಶ್ ಸ್ವಾಗತಿಸಿದರು. ಲಲಿತಾ ಭಾಸ್ಕರ್ ವಂದಿಸಿದರು. ಸುಗಂಧಿ ಕೇಶವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net