ಮಿಸಾಳೆ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ

20Uribinahatti1
Published on

ಬೆಳಗಾವಿ: ಪ್ರತಿಷ್ಠಾನ ಸ್ಥಾಪಿಸಿ ತನ್ಮೂಲಕ ಶೈಣಿಕ ೇತ್ರದ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ದಿ.ನಾಗಪ್ಪ ಮಿಸಾಳೆ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿಯ ಆರ್​ಸಿಯು ಪ್ರೊ.ಡಾ.ಚಂದ್ರಕಾಂತ ವಾಮಾರೆ ಹೇಳಿದರು.

ಸಮೀಪದ ಮಾರಿಹಾಳ ಗ್ರಾಮದಲ್ಲಿ ನಾಗಪ್ಪ ಮಿಸಾಳೆ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಜೀವನ ಗೌರವ ಪುರಸ್ಕಾರ ಹಾಗೂ ಆದರ್ಶ ಶಿಕ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿಗೆ ಬೆಳಕು ನೀಡುವ ಗುರು ಎಂದೆಂದೂ ಪೂಜ್ಯನಿಯ. ಈ ಸ್ಥಾನಕ್ಕೆ ಸಮಾನವಾದದು ಬೇರೊಂದಿಲ್ಲ. ಹೀಗಾಗಿ, ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಬಾಳು ಬೆಳಗುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ನಿವೃತ್ತ ಉಪ ಪ್ರಾಚಾರ್ಯ ಡಾ.ಕೃಷ್ಣಾ ಬಡಿಗೇರ ಮಾತನಾಡಿ, ಜಗತ್ತಿನ ಬಹುತೇಕ ಸಾಧಕರಲ್ಲಿ ಶಿಕರನ್ನೇ ಕಾಣಬಹುದಾಗಿದೆ. ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಡಾ.ಗಜಾನನ ನಾಯ್ಕ ಮಾತನಾಡಿದರು. ಶಿಕರಾದ ಶುಭಾ ಭಟ್​, ಸುಶೀಲಾ ಗುರವ, ಖಂಡು ಪಾಟೀಲ, ಕವಿತಾ ಪರಮಾಣಿಕ ಹಾಗೂ ಗಜಾನನ ಧಾಮಣೇಕರ ಅವರಿಗೆ ಆದರ್ಶ ಶಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಮೇಶ ಮಿಸಾಳೆ ಅಧ್ಯತೆ ವಹಿಸಿದ್ದರು. ವಿಷ್ಣುಪಂತ ಮಿಸಾಳೆ, ಕೃಷ್ಣಾ ಮಿಸಾಳೆ, ಗೋವಿಂದ ಮಿಸಾಳೆ, ಪ್ರಣಿಲ ಮಿಸಾಳೆ, ಆನಂದ ಮಿಸಾಳೆ, ಡಾ.ಅಜಯ ದಳವಿ, ವಿಜಯ ದಳವಿ, ಆನಂದ ಮಿಸಾಳೆ, ಸಿದ್ಧೇಶ ಮಿಸಾಳೆ, ಸರೋಜಾ ದಳವಿ, ಶಾಮಲಾ ದಳವಿ, ವಿಜಯ ದಳವಿ, ಅಜೇಯ ದಳವಿ ಇತರರಿದ್ದರು. ರಾಜೇಶ ಸೊಗಲಿ, ಗೋವಿಂದ ಮಿಸಾಳೆ ನಿರೂಪಿಸಿದರು. ಡಾ.ಡಿ.ಎನ್​.ಮಿಸಾಳೆ ಸ್ವಾಗತಿಸಿದರು. ಸಿದ್ಧಾರ್ಥ ಮಿಸಾಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net