ಕರೊನಾ ಸೇನಾನಿಗಳ ಕಾರ್ಯ ಶ್ಲಾಘನೀಯ

17-RNR-04
Published on

ರಾಣೆಬೆನ್ನೂರ: ತಾಲೂಕಿನ ಆರೆಮಲ್ಲಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ವತಿಯಿಂದ ಕರೊನಾ ವೈರಸ್ ತಡೆಗಟ್ಟಲು ಶ್ರಮಿಸಿದ ಆಶಾಕಾರ್ಯಕರ್ತೆಯರು ಮತ್ತು ಪೊಲೀಸರನ್ನು ಶನಿವಾರ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾತನಾಡಿ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕರೊನಾ ಪ್ರಕರಣಗಳು ಕಡಿಮೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಕರೊನಾ ತಡೆಗಟ್ಟಲು ಅನುಕೂಲಕರವಾಗಿದೆ. ವೈರಸ್ ತಡೆಗಟ್ಟಲು ಆಶಾಕಾರ್ಯಕರ್ತೆಯರು, ಪೊಲೀಸ್, ವೈದ್ಯರು, ಶುಶ್ರೂಷಕಿಯರು, ಪತ್ರಕರ್ತರು ಸೇರಿ ಪ್ರತಿಯೊಬ್ಬರೂ ಸಹಕರಿಸಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಲಾಕ್​ಡೌನ್ ಸಂದರ್ಭದಲ್ಲಿ ವಿವಿಧ ಮಠಾಧೀಶರು ಭಕ್ತರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸೇನಾನಿಗಳಿಗೆ ಮತ್ತು ಬಡವರಿಗೆ ಕೈಲಾದ ಸಹಾಯ ಮಾಡಲು ಮುಂದೆ ಬರಬೇಕು. ಸರ್ಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರನ್ನು ವಿಮಾ ಪಾಲಿಸಿಗೆ ಒಳಪಡಿಸಬೇಕು ಎಂದರು.

ಶಾಸಕ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಉಪವಿಭಾಗಾಧಿಕಾರಿ ಡಾ.ದಿಲೀಪ್ ಶಶಿ, ಡಿವೈಎಸ್​ಪಿ ಟಿ.ವಿ. ಸುರೇಶ, ದಯಾಲಾಲ್ ಸಂಗವಿ, ನಿವೃತ್ತ ಪಿಎಸ್​ಐ ಬಿ.ಇ. ಸುರ್ವೆ, ಗ್ರಾಮ ಲೆಕ್ಕಾಧಿಕಾರಿ ರುದ್ರೇಶ, ಆಶಾಕಾರ್ಯಕರ್ತೆಯರಾದ ನಾಗಮ್ಮ ರಾಮಕ್ಕಳವರ, ಚೌಡಮ್ಮ ಕಿಲಾರಿ, ನೀಲಮ್ಮ ಚಣ್ಣನವರ, ಸುಜಾತಾ ಕಮ್ಮಾರ, ಸಾವಿತ್ರಾ ನಿಟ್ಟೂರ, ಮಂಜಪ್ಪ ಮೇಡ್ಲೇರಿ, ಶಿವಕುಮಾರ ಸುರ್ವೆ, ಗ್ರಾಪಂ ಪಿಡಿಒ ಡಿ.ಬಿ. ಹರಿಜನ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net