ಮೊಗವೀರ ಯುವ ಸಂಘದ ಕಾರ್ಯ ಶ್ಲಾಘನೀಯ

kota (8)
Published on

ಕೋಟ: ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಈ ಜಗತ್ತಿನಲ್ಲಿ ಹುಟ್ಟಿಕೊಂಡಿಲ್ಲ. ಈ ದಿಸೆಯಲ್ಲಿ ಪ್ರತಿಯೊಬ್ಬರು ಅದರ ಮಹತ್ವ ಅರಿತು ರಕ್ತದಾನಕ್ಕೆ ಮುಂದಾಗಬೇಕು. ಸಾಮಾಜಿಕ ಬದ್ಧತೆ ಪ್ರದರ್ಶಿಸುವುದರೊಂದಿಗೆ ಸಮುದಾಯದ ಏಳಿಗೆಗೆ ಮೊಗವೀರ ಯುವ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕೋಟದ ಗೀತಾನಂದ ೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಕರೆ ನೀಡಿದರು.

ಭಾನುವಾರ ಗುಂಡ್ಮಿ ಕರಾವಳಿ ಮೊಗವೀರ ಸಭಾಭವನದಲ್ಲಿ ಸಾಲಿಗ್ರಾಮ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಸಾಲಿಗ್ರಾಮ ಘಟಕ, ಮಹಿಳಾ ಸಂಘಟನೆ ಸಾಲಿಗ್ರಾಮ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ರಕ್ತನಿಧಿ ಕೆ.ಎಂ.ಸಿ ಆಸ್ಪತ್ರೆ, ಮಣಿಪಾಲ, ಜಿಲ್ಲಾಡಳಿತ ಉಡುಪಿ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮೊಗವೀರ ಯುವ ಸಂಘ ಸಾಲಿಗ್ರಾಮ ಘಟಕ ಅಧ್ಯಕ್ಷ ಕಿರಣ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್ ಬೆಳ್ಳಂಪಳ್ಳಿ, ಮಾಜಿ ಅಧ್ಯಕ್ಷ ಎಂ.ಎಸ್.ಸಂಜೀವ, ರಾಜೇಂದ್ರ ಹಿರಿಯಡ್ಕ, ಘಟಕದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಜಿಲ್ಲಾ ಘಟಕದ ರವೀಶ್ ಶ್ರೀಯಾನ್ ಕೊರವಡಿ, ಅಘೋರೇಶ್ವರ ಕಲಾರಂಗದ ಅಧ್ಯಕ್ಷ ನಿತ್ಯಾನಂದ ನಾಯಿರಿ, ಗಾಣಿಗ ಯುವ ಸಂಘ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ, ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ, ಗಜಾನನ ಮಿತ್ರ ಮಂಡಳಿ ತೋಡ್ಕಟ್ಟು ಅಧ್ಯಕ್ಷ ಕರುಣಾಕರ ಪೂಜಾರಿ, ಕೆಎಂಸಿ ರಕ್ತನಿಧಿಯ ಡಾ.ಕಾರ್ತಿಕ್, ಮೊಗವೀರ ಮಹಿಳಾ ಸಂಘಟನೆ ಅಧ್ಯಕ್ಷೆ ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.

ಮೊಗವೀರ ಯುವ ಸಂಘದ ಮಾಜಿ ಅಧ್ಯಕ್ಷ ಚಂದ್ರ ಬಂಗೇರ ಸ್ವಾಗತಿಸಿದರು. ರಾಜು ಕರಾವಳಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಸತೀಶ್ ಮರಕಾಲ ವಂದಿಸಿದರು. ಗಾಣಿಗ ಯುವ ಸಂಘಟನೆ ಕೋಟ ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು, ತೋಡಕಟ್ಟು ಪಾರಂಪಳ್ಳಿ ಚಿತ್ರಪಾಡಿ ಶ್ರೀ ಗಜಾನನ ಮಿತ್ರ ಮಂಡಳಿ ಸಹಕಾರ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net