ಅನಂತಪದ್ಮನಾಭ ಫ್ರೆಂಡ್ಸ್‌ನ ಕಾರ‌್ಯ ಶ್ಲಾಘನಾರ್ಹ

hebri
Published on

ಹೆಬ್ರಿ: ಹೆಬ್ಬಿರಿ ಉತ್ಸವಕ್ಕೆ ಹದಿನೈದು ವರ್ಷ ತುಂಬಿರುವುದು ಸಂತಸದ ವಿಷಯ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಆರೋಗ್ಯ ಕಾರ್ಯಕ್ರಮಗಳ ಏರ್ಪಡಿಸಿರುವ ಅನಂತಪದ್ಮನಾಭ ಫ್ರೆಂಡ್ಸ್‌ನ ಕಾರ್ಯ ಶ್ಲಾಘನಾರ್ಹ. ಜತೆಗೆ ಈ ಸಂಸ್ಥೆಯ ಅನೇಕರು ನೇತ್ರದಾನಕ್ಕೆ ಮುಂದಾಗಿದ್ದು, ಸಾಮಾಜಿಕ ಬದ್ಧತೆಯ ಪ್ರತೀಕ ಎಂದು ಧಾರ್ಮಿಕ ಮುಂದಾಳು ಎಚ್.ಭಾಸ್ಕರ ಜೋಯಿಸ್ ಹೇಳಿದರು.

ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಆಶ್ರಯದಲ್ಲಿ 15ನೇ ವರ್ಷದ ಹೆಬ್ಬೇರಿ ಉತ್ಸವ ಪ್ರಯುಕ್ತ ಹೆಬ್ರಿಯಲ್ಲಿ ನೇತ್ರ ಉಚಿತ ತಪಾಸಣೆ, ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಸಾದ್ ನೇತ್ರಾಲಯ ವೈದ್ಯೆ ಡಾ.ಕ್ರೀನ್, ಸಂಘಟಕ ಶೇಖರ್, ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ ದೇವಾಡಿಗ, ಫ್ರೆಂಡ್ಸ್‌ನ ಅವಿನಾಶ್ ಜೋಗಿ, ನವೀನ್ ದೇವಾಡಿಗ, ರಮೇಶ್ ದೇವಾಡಿಗ, ಶರತ್ ದೇವಾಡಿಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net