ಅಮೃತೇಶ್ವರಿ ಕಂಪನಿ ಕಾರ್ಯ ಶ್ಲಾಘನಾರ್ಹ

karyagara
ವಿವಿಧ ಇಲಾಖೆ, ಸಂಸ್ಥೆಯಗಳ ಸಹಯೋಗದಲ್ಲಿ ಸಿಹಿ ನೀರಿನಲ್ಲಿ ಮುತ್ತು ಕೃಷಿ ಮತ್ತು ಅಲಂಕಾರಿಕ ಮೀನು ಸಾಕಣೆ ಕಾರ್ಯಾಗಾರ ಕೋಟದಲ್ಲಿ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕೋಟ

ರೈತರು ಮತ್ತು ಮೀನುಗಾರರ ಶ್ರೇಯೋಭಿವೃದ್ಧಿಗೆ ಉಡುಪಿ ಕಿನಾರ ಮೀನುಗಾರರ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಶ್ರಮಿಸುತ್ತಿರುವುದು ಶ್ಲಾಘನಾರ್ಹನ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಹೇಳಿದರು.

ಕೋಟ ಪರಿಸರದಲ್ಲಿ ಗುರುವಾರ ಸಿಹಿ ನೀರಿನಲ್ಲಿ ಮುತ್ತು ಕೃಷಿ, ಅಲಂಕಾರಿಕ ಮೀನು ಸಾಕಣೆ ಹಾಗೂ ಪಚ್ಚಿಲೆ ಮತ್ತು ಕಲ್ಲದಿಂದ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಳಿಕ ಉಡುಪಿ ಕಿನಾರ ಕಂಪನಿಯ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆಕ್ಕಾಗಿ ಯುಕೆ ಟೆಸ್ಟಿ ಆ್ಯಪ್ ಅನಾವರಣಗೊಳಿಸಿದರು. ಜಲಾನಯನ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಭಾ. ಕೃ. ಅ. ಪ. ಕೃಷಿ ವಿಜ್ಞಾನ ಕೇಂದ್ರ, ಸ್ಕೊಡ್ವೆಸ್ ಸಂಸ್ಥೆ, ಆಯುಷ್ಮಾನ್‌ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಸಹಯೋಗ ವಹಿಸಿದ್ದವು. ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಮಾತನಾಡಿದರು. ಶಾಸಕ ಗುರುರಾಜ್ ಗಂಟಿಹೊಳೆ, ಬ್ರಹ್ಮಾವ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ.ಧನಂಜಯ್ ಬಿ, ಪ್ರಮುಖರಾದ ವಿವೇಕ್ ಆರ್, ಬಬಿನ್ ಬೊಪಣ್ಣ ಕೆ, ಹರೀಶ್ ಜಿ, ಡಾ.ಎ.ಎ.ಫಝಲ್, ಪ್ರಜ್ವಲ್ ಎಸ್, ಎ.ಶ್ರೀನಿವಾಸ ರಾವ್, ಡಾ.ರಾಜೇಂದ್ರ ಎಸ್ ನಾಯಕ್, ರವೀಂದ್ರ ರಾವ್, ಯೋಗೀಶ್, ಲೋಹಿತ್ ಖಾರ್ವಿ, ಬೇಬಿ ಮೆಂಡನ್, ಸುದಿನ ಕೋಡಿ, ಪುಷ್ಪಾ ಶೆಟ್ಟಿ, ಕಾರ್ತಿಕ, ಅಕ್ಷಯ, ರಾಹುಲ್, ವಿದೀಕ್ಷಾ, ಭೂಮಿಕಾ, ಸುಶ್ಮಿತಾ, ಮಾನಸ ಸ್ವಾತಿ ಉಪಸ್ಥಿತರಿದ್ದರು. ಗಂಗಾಧರ್ ನಾಯಕ್ ನಿರೂಪಿಸಿದರು.

karyagara
ವಿವಿಧ ಇಲಾಖೆ, ಸಂಸ್ಥೆಯಗಳ ಸಹಯೋಗದಲ್ಲಿ ಸಿಹಿ ನೀರಿನಲ್ಲಿ ಮುತ್ತು ಕೃಷಿ ಮತ್ತು ಅಲಂಕಾರಿಕ ಮೀನು ಸಾಕಣೆ ಕಾರ್ಯಾಗಾರ ಕೋಟದಲ್ಲಿ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net