ಕುಂದೇಶ್ವರದಲ್ಲಿ ಶತರುದ್ರಾಭಿಷೇಕ

SHI
Published on

ಕುಂದಾಪುರ: ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಬುಧವಾರ ಮಹಾಶಿವರಾತ್ರಿ ಆಚರಣೆ ನಡೆಯಿತು. ಬೆಳಗ್ಗೆಯಿಂದ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಿಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದಿಂದ ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನೆ ಕಾರ್ಯಕ್ರಮ ನಡೆಯಿತು.

ಸಂಜೆ ವೆಂಕಟೇಶ ವೈದ್ಯ ಕೊಮೆ ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ಮಕ್ಕಳಿಂದ ಕೃಷ್ಣಾರ್ಜುನ ಕಾಳಗ ಯಕ್ಷಗಾನ, ನೃತ್ಯವಿದುಷಿ ಪ್ರವಿತಾ ಅಶೋಕ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯಸಿಂಚನ, ಕುಂದೇಶ್ವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ ನೆರವೇರಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್, ಸದಸ್ಯರಾದ ಕೆ. ಸತೀಶ ಗಾಣಿಗ, ಜಿ.ಎಸ್. ಭಟ್, ಕೆ.ನಾಗರಾಜ ನಾಯ್ಕ, ವಿಠಲ ಕಾಂಚನ್, ದಿನೇಶ್, ಗಿರಿಜಾ ಉದಯ ಹವಾಲ್ದಾರ್, ಸೀಮಾ ಚಂದ್ರ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net