ಯಶಸ್ವಿ ಕಲಾವೃಂದದ ಕಾರ್ಯ ಶ್ಲಾಘನಾರ್ಹ

YASHASWI
ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ಯಕ್ಷಗಾನ ವೈಭವವ ಕಾರ್ಯಕ್ರಮದಲ್ಲಿ ಮಂಜುನಾಥ ಭಟ್ ಮಾತನಾಡಿದರು.
Published on

ಕೋಟ: ಸಾಂಸ್ಕೃತಿಕ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮದ ಒಂದು ಅಂಗ. ಅದರಲ್ಲೂ ಚಿಣ್ಣರ ಯಕ್ಷಗಾಯನ ಎಲ್ಲರನ್ನೂ ಆಕರ್ಷಿಸುವ ಕಾರ್ಯಕ್ರಮ. ಮಕ್ಕಳ ಪ್ರತಿಭೆ ಹೊರತರುವ ಯಶಸ್ವಿ ಕಲಾವೃಂದದ ಕಾರ್ಯ ಅಭಿನಂದನಾರ್ಹ ಎಂದು ಹಟ್ಟಿಯಂಗಡಿ ಮಾರಲದೇವಿ ದೇವಳ ಪ್ರಧಾನ ಅರ್ಚಕ ಮಂಜುನಾಥ ಭಟ್ ಹೇಳಿದರು.

ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಶ್ವೇತಯಾನ-72 ಕಾರ್ಯಕ್ರಮದಡಿಯಲ್ಲಿ ಇತ್ತೀಚೆಗೆ ಕ್ಷೇತ್ರದಲ್ಲಿ ಯಕ್ಷಗಾನ ವೈಭವದಲ್ಲಿ ಮಾತನಾಡಿದರು.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಹುಲ್ ಕುಂದರ್ ಕೋಡಿ, ಕಿಶನ್ ಪೂಜಾರಿ ಬಾಳೆಹಿತ್ಲು, ಪವನ್ ಆಚಾರ್, ಪೂಜಾ ಆಚಾರ್, ಪಂಚಮಿ ವೈದ್ಯ, ಹರ್ಷಿತಾ ಅಮೀನ್, ರಾಹುಲ್ ಅಮೀನ್, ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net