ಗ್ರಾಮಸ್ಥರನ್ನು ಕಂಡು ಓಡಿದ ಮರ ಕಟುಕರು

FotoJet
Published on

 ರಾಮನಗರ :  ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿನ ಸರ್ಕಾರಿ ಗೋಮಾಳ ಜಮೀನಿನಲ್ಲಿ ಬೆಳೆದಿದ್ದ ಜಮ್ಮುನೇರಳೆ ಮರಗಳನ್ನು ಸೋಮವಾರ ಅಕ್ರಮವಾಗಿ ಕಡಿಯುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರನ್ನು ಕಂಡು ಓಡಿಹೋಗಿದ್ದಾರೆ.

ಲಕ್ಕೋಜನಹಳ್ಳಿ ಸ.ನಂ. 20ರಲ್ಲಿ 151 ಎಕರೆ ಸರ್ಕಾರಿ ಗೋಮಾಳ ಜಮೀನನಲ್ಲಿ ಬೆಳೆದಿದ್ದ 30 ವರ್ಷಕ್ಕೂ ಹಳೆಯದಾದ 14 ಜಮ್ಮುನೇರಳೆ ಮರಗಳನ್ನು ಹಗಲು ವೇಳೆಯಲ್ಲೇ ಅಕ್ರಮವಾಗಿ ಕಡೆದು ಹಾಕುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಮರ ಕಡಿಯುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಹೋಗಬೇಕಾದರೆ ಗ್ರಾಮಸ್ಥರನ್ನು ಕಂಡು ಕತ್ತರಿಸಿದ ಮರಗಳನ್ನು ಬಿಟ್ಟು ಮರ ಸಾಗಿಸಲು ತಂದ ಟೆಂಪೋ, ಮತ್ತಿತರ ಸಾಧನ ತೆಗೆದುಕೊಂಡು ಓಡಿ ಹೋಗಿದ್ದಾರೆ.

ಲಕ್ಕೋಜನಹಳ್ಳಿಯಿಂದ ಸ್ವಲ್ಪ ದೂರದಲ್ಲಿರುವುದರಿಂದ ಗ್ರಾಮದ ಜನರಿಗೆ ಬಹು ಬೇಗನೆ ಮರಕಡಿಯುತ್ತಿರುವ ವಿಷಯ ಗೊತ್ತಾಗಿಲ್ಲ. ಯಾರ ಅನುಮತಿ ಇಲ್ಲದೆ, ಅಕ್ರಮವಾಗಿ ಮರ ಕಡಿದು ಸಾಗಿಸುತ್ತಿದ್ದರು ಎನ್ನಲಾಗಿದೆ. ಗ್ರಾಮಸ್ಥರು ಸ್ಥಳಕ್ಕೆ ಹೋಗುವಷ್ಟರಲ್ಲಿ ಪರಾರಿಯಾಗಿದ್ದಾರೆ. ದೊಡ್ಡದಾದ 14 ಮರ ಕಡಿದಿದ್ದು, ಕೆಲವೊಂದು ಮರದ ದಿಮ್ಮಿಗಳನ್ನು ಸಾಗಿಸಿದ್ದಾರೆ. ಮರಗಳು ಉತ್ತಮ ಜಮ್ಮುನೇರಳೆ ಹಣ್ಣು ಬಿಡುತ್ತಿದ್ದವು ಎಂದು ಗ್ರಾಮಸ್ಥರು ಹೇಳುತ್ತಾರೆ.

ಅರಣ್ಯ ಇಲಾಖೆ, ಕಂದಾಯ ಇಲಾಖೆಗೆ ಗ್ರಾಮಸ್ಥರು ವಿಷಯ ತಿಳಿಸಿದ ಪರಿಣಾಮ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರ ಕಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮದ ಸ್ವಾಮಿ ಎಂಬುವರು ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net