ಟಯರ್​ ಸ್ಫೋಟಗೊಂಡು ಆಲೂಗಡ್ಡೆ ವಾಹನ ಪಲ್ಟಿ

mgd
Published on

ಮಾಗಡಿ: ತಾಲೂಕಿನ ನಾರಸಂದ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಆಲೂಗಡ್ಡೆ ಸಾಗಿಸುತ್ತಿದ್ದ ಟೆಂಪೋ ಆಯತಪ್ಪಿ ಪಲ್ಟಿಯಾಗಿದ್ದು, ಚಾಲಕ ಪ್ರ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಾಸನದಿಂದ ಬೆಂಗಳೂರಿಗೆ ತೆರಳುವಾಗ ವಾಹನದ ಟಯರ್​ ಸ್ಫೋಟಗೊಂಡಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಹೆದ್ದಾರಿಗುರುಳಿದೆ. ವಾಹನ ಪಲ್ಟಿಯಾಗಿ ನೂರಾರು ಮೂಟೆ ಆಲೂಗಡ್ಡೆ ರಸ್ತೆಪಾಲಾಗುತ್ತಿದ್ದಂತೆ ಜನ ಮುಗಿಬಿದ್ದು, ಆಲೂಗಡ್ಡೆಯನ್ನು ತುಂಬಿಕೊಂಡು ಹೋಗುತ್ತಿದ್ದರು. ಈ ವೇಳೆ ಸಲಿನ ಮಾಲೀಕ, "ಸಾಲ ಮಾಡಿ ಆಲೂಗಡ್ಡೆ ಬೆಳೆದಿದ್ದೇನೆ, ಯಾರೂ ತೆಗೆದುಕೊಂಡು ಹೋಗಬೇಡಿ' ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ದೃಶ್ಯ ಮನಕಲುಕುತ್ತಿತ್ತು. ಅವಡದಿಂದ ಮಂಗಳೂರು&ಬೆಂಗಳೂರು ರಸ್ತೆಯ ನಾರಸಂದ್ರ ಬಳಿ ಸಂಚಾರಸಿಕ್ಕು ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net