ಟಯರ್ ಸಿಡಿದು ಟೆಂಪೋ ಪಲ್ಟಿ

FotoJet (2)
Published on

9 ಕೂಲಿಕಾರ್ಮಿಕರಿಗೆ ಗಾಯ | ಚಿನ್ನೇಪಲ್ಲಿ ಕ್ರಾಸ್‌ಬಳಿ ಅವಘಡ

ಬಾಗೇಪಲ್ಲಿ: ತಾಲೂಕಿನ ಚಿನ್ನೇಪಲ್ಲಿ ಕ್ರಾಸ್ ಬಳಿ ಕೂಲಿಕಾರರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವ ಘಟನೆ ಸೋಮವಾರ ನಡೆದಿದೆ.

ಗ್ರಾಮದ ವೆಂಕಟರವಣಮ್ಮ, ವೆಂಕಟಲಕ್ಷ್ಮಮ್ಮ, ಕಲ್ಪನಾಗೆ ಕೈ, ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರಿಗೆ ಬಾಗೇಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಗಾಯಾಳುಗಳು ಮಾಡಪಲ್ಲಿ ಗ್ರಾಮದ ಕೂಲಿಕಾರ್ಮಿಕರು ಎನ್ನಲಾಗಿದೆ. ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ಕಳೆ ತೆಗೆಯುವುದು, ಕಟಾವು, ಇಟ್ಟಿಗೆ ಫ್ಯಾಕ್ಟರಿ, ಸಿಮೆಂಟ್ ಕೆಲಸ ವಿವಿಧ ಕೆಲಸ ಮಾಡುತ್ತಿದ್ದ ಇವರು ಸೋಮವಾರ ಬೆಳಗಿನ ಜಾವ 4.30 ಗಂಟೆಗೆ ಗ್ರಾಮದಿಂದ ಮಿನಿ ಟೆಂಪೋದಲ್ಲಿ 9 ಮಂದಿ ಹೊರಟಿದ್ದರು. ಜಿಲಕರಪಲ್ಲಿ ಸಮೀಪ ಹಿಪ್ಪುನೇರಳೆ (ರೇಷ್ಮೆ) ಸೊಪ್ಪ ಕಟಾವು ಮಾಡಿ ಸೊಪ್ಪು ಕೊಯ್ದುಕೊಂಡು ಮಾಡಪಲ್ಲಿಗೆ ವಾಪಸ್ಸಾಗುವ ವೇಳೆ ಚಿನ್ನೇಪಲ್ಲಿ ಕ್ರಾಸ್ ಬಳಿ ವಾಹನದ ಟಯರ್ ಸಿಡಿದು ವಾಹನ ಪಲ್ಟಿಯಾಗಿದೆ. ಗಾಯಾಳುಗಳನ್ನು ಬಾಗೇಪಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net