ಯಲಬುರ್ಗಾ: ತಾಲೂಕಿನ ಗಾಣದಾಳದಲ್ಲಿ ಶುಕ್ರವಾರ ಸಂಜೆ ಶುರುವಾದ ಮಳೆ ಸಿಡಿಲಿಗೆ 36 ಕುರಿಗಳು ಸಾವನ್ನಪ್ಪಿವೆ.
ಇದನ್ನೂ ಓದಿ: ಬಿರುಗಾಳಿ, ಮಳೆಗೆ ಬಿದ್ದ ಜಾಹೀರಾತು ನಾಮಫಲಕ
ಗ್ರಾಮದ ಕುರಿಗಾಹಿ ಗವಿಸಿದ್ದಪ್ಪ ನವಲಹಳ್ಳಿ ಎಂಬುವರಿಗೆ ಸೇರಿದ್ದು, ಜಮೀನಿನಲ್ಲಿ ಕುರಿ ಮೇಯಿಸಲು ತೆರಳಿದ್ದು, ಸಾಯಂಕಾಲ ಮಳೆ ಗುಡಗು, ಸಿಡಿಲಿನ ಆರ್ಭಟ ಜೋರಾಗಿದ್ದರಿಂದ ರೈತ ಗವಿಸಿದ್ದಪ್ಪ ಕುರಿ ಹಟ್ಟಿಯ ಕಡೆಗೆ ಬರುತ್ತಿದ್ದರು.
ಅದರೂ, ಸಂಜೆ ವೇಳೆ ಸಿಡಿಲು ಜೋರಾಗಿ ಬಡಿತದಿಂದ ಕುರಿಗಳು ಸಾವನಪ್ಪಿವೆ. ಸ್ಥಳಕ್ಕೆ ತಹಸೀಲ್ದಾರ್ ಬಸವರಾಜ್ ತೆನ್ನಳ್ಳಿ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕೊಡಲಾಗವುದು ಎಂದು ಭರವಸೆ ನೀಡಿದರು.