ಬಿರುಗಾಳಿ, ಮಳೆಗೆ ಬಿದ್ದ ಜಾಹೀರಾತು ನಾಮಫಲಕ

20 04 2025_BGR RURAL_PAGE_4
Published on

ಸರ್ಜಾಪುರ: ಶನಿವಾರ ಸಂಜೆ ಬೀಸಿದ ಬಿರುಗಾಳಿ, ಮಳೆಗೆ ಸರ್ಜಾಪುರ ಸಮೀಪದ ಯಮರೆ ಗ್ರಾಮ ಪಂಚಾಯಿತಿ ಬಳಿಯಿದ್ದ ಬೃಹತ್​ ಗಾತ್ರದ ಜಾಹೀರಾತು ನಾಮಫಲಕ ಬಿದ್ದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಜಾಹೀರಾತು ನಾಮಫಲಕವು ಮನೆಯ ಹಿಂಬದಿಗೆ ಬಿದ್ದ ಕಾರಣ ಯಾವುದೇ ಅಪಾಯವಾಗಿಲ್ಲ. ಒಂದು ವೇಳೆ ಮುಂಭಾಗಕ್ಕೆ ಉರಳಿದರೆ ರಸ್ತೆಯಲ್ಲಿ ಹಾದು ಹೋಗುವ ವಾಹನ ಸವಾರರ ಮೇಲೆ ಬಿಳುವ ಸಾಧ್ಯತೆಗಳಿತ್ತು. ಸರ್ಜಾಪುರ ಬೆಂಗಳೂರು ರಸ್ತೆಯ ಉದ್ದಕ್ಕೂ ಖಾಸಗಿ ನಿವೇಶನ ಮತ್ತು ಕಟ್ಟಡಗಳ ಮೇಲೆ ಅನಧಿಕೃತವಾಗಿ ಜಾಹೀರಾತು ನಾಮಫಲಕಗಳು ರಾರಾಜಿಸುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net