

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿರುವ ಶ್ರೀಮಾರಿಕಾಂಬಾ ದೇವಿ ದೇವಸ್ಥಾನದ ಬಾಗಿಲ ಬೀಗ ಮುರಿದು ಎರಡು ಬಂಗಾರದ ಸರಗಳನ್ನು ಕಳವು ಮಾಡಿಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.
ಮಂಗಳವಾರ ರಾತ್ರಿ ಯಾರೋ ಕಳ್ಳರು ಮಾರಿಕಾಂಬಾ ದೇವಸ್ಥಾನ ಬಾಗಿಲ ಬೀಗ ಒಡೆದು ಒಳ ನುಗ್ಗಿ ದೇವಿಯ ಕೊರಳಲ್ಲಿರುವ ಸುಮಾರು 40 ಗ್ರಾಂ. ತೂಕದ ಎರಡು ಬಂಗಾರದ ಸರಗಳನ್ನು ಕಳವು ಮಾಡಿದ್ದಾರೆ ಎಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.