ಕಲಾ ಪ್ರಕಾರ ಪೋಷಿಸುವ ಕಾರ್ಯ

sanmana
ಯಸ್ಕೋರ್ಡ್ ಸಮಾರೋಪ ಬೈಂದೂರು ಯಸ್ಕೋರ್ಡ್ ಟ್ರಸ್ಟ್ ನೇತೃತ್ವದಲ್ಲಿ ಮೂರು ದಿನಗಳ ಯಕ್ಷ-ನಾಟಕೋತ್ಸವ ವರ್ಷವೈಭವದ ಸಮಾರೋಪದಲ್ಲಿ ಯಕ್ಷಗಾನ ಭಾಗವತ ಮಂಜುನಾಥದಾಸ್ ಅವರನ್ನು ಸನ್ಮಾನಿಸಲಾಯಿತು.
Published on

ಬೈಂದೂರು: ಸಮಾಜ ಸಸೂತ್ರವಾಗಿ ನಡೆಯಲು ಸಾಂಸ್ಕೃತಿಕ ವಾತಾವರಣ ಅಗತ್ಯ. ಅದು ಎಷ್ಟು ಮುಖ್ಯ ಎಂಬುದನ್ನು ಹಿರಿಯರು ಕಂಡುಕೊಂಡು ಪೋಷಿಸುತ್ತಾ ಬಂದಿದ್ದರು. ಮುಂದೆಯೂ ಕಥೆ, ಸಂಗೀತ, ನಾಟಕ ಮೊದಲಾದ ಪ್ರಕಾರಗಳನ್ನು ಪೋಷಿಸುವ ಕಾರ್ಯವಾಗಬೇಕಿದೆ ಎಂದು ಬೈಂದೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ನವೀನ್ ಎಚ್.ಜೆ. ಹೇಳಿದರು.

ಬೈಂದೂರು ಯಸ್ಕೋರ್ಡ್ ಟ್ರಸ್ಟ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶಾರದಾ ವೇದಿಕೆಯಲ್ಲಿ ನಡೆದ ಮೂರು ದಿನಗಳ ಯಕ್ಷ-ನಾಟಕೋತ್ಸವ ವರ್ಷವೈಭವದ ಸಮಾರೋಪದಲ್ಲಿ ಮಾತನಾಡಿದರು.

ಯಕ್ಷಗಾನ ಭಾಗವತ ಮಂಜುನಾಥದಾಸ್ ಅವರನ್ನು ಸನ್ಮಾನಿಸಲಾಯಿತು. ಯಸ್ಕೋರ್ಡ್ ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಉಪ್ಪುಂದ ಅಧ್ಯಕ್ಷ ಮಂಜುನಾಥ ದೇವಾಡಿಗ, ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಭಾಸ್ಕರ್ ಉಪಸ್ಥಿತರಿದ್ದರು. ಯಸ್ಕೋರ್ಡ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುರಭಿ ಸಂಸ್ಥೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net