ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರು ನಗರಕ್ಕೆ ಕೊಂಡೊಯ್ಯುವ ಯೋಜನೆಯನ್ನು ವಿರೋಧಿಸಿ ಕೆರೆ ಅಚ್ಚುಕಟ್ಟುದಾರರ ಸಂ ಮತ್ತೆ ಹೋರಾಟ ಪ್ರಾರಂಭಿಸಿದ್ದು, ಆ.6ರಂದು ಪಾದಯಾತ್ರೆ ಪ್ರಾರಂಭಿಸಿ, ಬಳಿಕ ತಾಲೂಕು ಕಚೇರಿ ಎದುರು ಅರ್ನಿದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದೆ.
ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರಿಗೆ ತೆಗೆದುಕೊಂಡು ಹೋಗುವುದನ್ನು ವಿರೋಧಿಸಿ 18 ತಿಂಗಳುಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ರೈತರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗಿದೆ. ಹೋರಾಟ ನಿರತ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಎನ್ಎಸ್ 163 ಸೆನ್ನಡಿ ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ರೈತರನ್ನು ಬಂಧಿಸಿ ಯೋಜನೆಗೆ ಭೂಮಿಪೂಜೆ ಮಾಡಿದ್ದಾರೆ. ಈ ವಿಷಯದಲ್ಲಿ ಸರ್ಕಾರದ ದೋರಣೆ ಖಂಡಿಸಿ ಹಾಗೂ "ನಮ್ಮ ನೀರು ನಮ್ಮ ಹಕ್ಕು.. ಪ್ರಾಣವಾದರೂ ಬಿಟ್ಟೇವು ನೀರು ಹರಿಯಲು ಬಿಡುವುದಿಲ್ಲ' ಎಂಬ ೂಷಣೆಯಡಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. ಆದ್ದರಿಂದ ನಗರಗೆರೆ ಹೋಬಳಿಯ ಪ್ರತಿ ಮನೆಯಿಂದ ಮಹಿಳೆಯರು, ಮಕ್ಕಳು, ವೃದ್ಧರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಂ ತಿಳಿಸಿದೆ.
ಸಂದ ಬೇಡಿಕೆಗಳು: ಎತ್ತಿನ ಹೊಳೆ ನೀರನ್ನು ಕೆರೆಗೆ ಹರಿಸಿ ಅರ್ಧದಷ್ಟು ನೀರನ್ನು ಕೃಷಿ ಚಟುವಟಿಕೆಗಳಿಗೆ ಮೀಸಲಿಡಬೇಕು. ಶಾಸಕರು ನೀಡಿರುವ ಆಶ್ವಾಸನೆಯಂತೆ ಮೊದಲು ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಹರಿಸಿ ಬಳಿಕ ಅಮೃತ್ 2.0 ಕಾಮಗಾರಿಯನ್ನು ಪ್ರಾರಂಭಿಸಬೇಕು. ಈಗ ಕೆರೆಯಲ್ಲಿ ಇರುವ ನೀರನ್ನು ಖಾಲಿ ಮಾಡಿ ಹೊಳು ತೆಗೆದು ಕೆರೆ ಕಟ್ಟೆ ಮತ್ತು ತೂಬು ದುರಸ್ತಿ ಮಾಡಿಸಬೇಕು. 1932ರ ಗುಡಿಬಂಡೆ ಕೆರೆ ಮತ್ತು ವಾಟದಹೊಸಹಳ್ಳಿ ಕೆರೆಯ ನೀರನ ಒಪ್ಪಂದವನ್ನು ಮುಂದುವರಿಸಬೇಕು. ಶುದ್ಧೀಕರಣ ಟಕವನ್ನು ವಾಟದಹೊಸಹಳ್ಳಿ ಕೆರೆಯ ಹತ್ತಿರ ನಿರ್ಮಿಸಿ ತ್ಯಾಜ್ಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಿಡಬೇಕು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರದಿಂದಲೇ ಸುತ್ತೋಲೆ ಹೊರಡಿಸುವ ಮೂಲಕ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು
ತೀವ್ರಗೊಳಿಸಲಾಗುವುದು ಎಂದು ಸಂದ ಪದಾಧಿಕಾರಿಗಳಾದ ಮಾಳಪ್ಪ, ಹರ್ಷವರ್ಧನ ರೆಡ್ಡಿ, ಕೂಡಿಲ್ಲಪ್ಪ ಹಾಗೂ ಇನ್ನಿತರ ಪದಾಧಿಕಾರಿಗಳು ತಿಳಿಸಿರುತ್ತಾರೆ.