ಬೆಂಕಿಗೆ ಹೊಗೆಸೊಪ್ಪು ಬ್ಯಾರನ್ ಭಸ್ಮ

24ark4
Published on

ಅರಕಲಗೂಡು: ತಾಲೂಕಿನ ಹಾನಗಲ್ ಸಮೀಪದ ಕರ್ಕಿಕೊಪ್ಪಲು ಗ್ರಾಮದಲ್ಲಿ ಹೊಗೆಸೊಪ್ಪು ಹದಗೊಳಿಸುತ್ತಿದ್ದಾಗ ಬೆಂಕಿ ತಗುಲಿ ಬ್ಯಾರನ್ ಭಸ್ಮವಾಗಿದೆ.


ಊರಿನ ರೈತ ಲೋಕೇಶ್ ಅವರಿಗೆ ಸೇರಿದ ಬ್ಯಾರನ್‌ನಲ್ಲಿ ಹದಗೊಳಿಸುತ್ತಿದ್ದಾಗ ಶನಿವಾರ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.


ಹದಗೊಳಿಸುತ್ತಿದ್ದ ಸುಮಾರು 400 ಕೆಜಿ ತೂಕದ ತಂಬಾಕು ಸುಟ್ಟು ಬೂದಿಯಾಗಿದೆ. ಅಪಾರ ಬೆಲೆಬಾಳುವ ಬ್ಯಾರನ್ ಮನೆಯಲ್ಲಿದ್ದ ಪೈಪ್‌ಗಳು ಛಾವಣಿ ಸುಟ್ಟಿವೆ. ಅರಕಲಗೂಡು ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬ್ಯಾರನ್ ಮನೆ ಪೂರ್ತಿ ಬೆಂಕಿಗೆ ಬಲಿಯಾಗಿತ್ತು. ಪರಿಹಾರ ಒದಗಿಸುವಂತೆ ರೈತರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net