ಅಂಗಡಿ ಮಾಲೀಕಗೆ 5 ಸಾವಿರ ರೂ.ದಂಡ

Fine
Published on

ಸುಳ್ಯ: ಅಂಬಟೆಡ್ಕ ಬಳಿ ಸ್ಟಿಕ್ಕರ್ ಕಟ್ಟಿಂಗ್ ಸಂಸ್ಥೆಯೊಂದು ಕಸದ ರಾಶಿಯನ್ನು ಅಂಬಟೆಡ್ಕ ಪ್ರೆಸ್‌ಕ್ಲಬ್ ಬಳಿ ಎಸೆದಿರುವುದಕ್ಕೆ ಸುಳ್ಯ ಪಟ್ಟಣ ಪಂಚಾಯಿತಿ 5,000 ರೂ. ದಂಡ ವಿಧಿಸಿದ ಘಟನೆ ಮಂಗಳವಾರ ನಡೆದಿದೆ. ಸುಳ್ಯದ ಪ್ರೆಸ್ ಕ್ಲಬ್ ಬಳಿ ಪದೇ ಪದೆ ಕಸ ಬಿಸಾಡುವುದನ್ನು ಗಮನಿಸಿ ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರೊಬ್ಬರು ಪತ್ತೆ ಕಾರ್ಯ ನಡೆಸಿದರು. ಅದರಲ್ಲಿ ದೊರೆತ ಮೊಬೈಲ್ ನಂಬರ್ ಆಧಾರದಲ್ಲಿ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದರು. ಅದನ್ನು ನಗರ ಪಂಚಾಯಿತಿ ಪರಿಶೀಲಿಸಿದಾಗ ಅಂಬಟೆಡ್ಕದ ಕಂಪ್ಯೂಟರೈಸ್ಡ್ ಸ್ಟಿಕ್ಕರ್ ಕಟ್ಟಿಂಗ್ ಅಂಗಡಿಯವರದ್ದೆಂದು ತಿಳಿಯಿತು. ಬಳಿಕ ಅವರಿಗೆ ನೊಟೀಸ್ ನೀಡಿ ಐದು ಸಾವಿರ ದಂಡ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net