ಸ್ವಯಂಸೇವಾ ಸಂಸ್ಥೆಗಳ ಸೇವೆ ಅಗತ್ಯ

ಸ್ವಯಂಸೇವಾ ಸಂಸ್ಥೆಗಳ ಸೇವೆ ಅಗತ್ಯ
Published on

ಗುಂಡ್ಲುಪೇಟೆ: ಹಿಂದುಳಿದ ಚಾಮರಾಜನಗರ ಜಿಲ್ಲೆಗೆ ಸರ್ಕಾರದ ಜತೆಗೆ ಸ್ವಯಂಸೇವಾ ಸಂಸ್ಥೆಗಳ ಸೇವೆ ತುಂಬ ಅಗತ್ಯವಾಗಿದೆ ಎಂದು ಪ್ರಾಂತಪಾಲ ಸುಬ್ರಹ್ಮಣ್ಯ ಹೇಳಿದರು.

ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಲಯನ್ಸ್ ಸಂಸ್ಥೆ ಆರಂಭಿಸುವ ಬಗ್ಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಡಜನತೆಗೆ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಸರ್ಕಾರದ ಸವಲತ್ತುಗಳು ದೊರಕದ ಜನರಿಗೂ ಅನುಕೂಲ ಆಗುವಂತೆ ಮಾಡುತ್ತಿದೆ. ಮಿಷನ್ ಚಾಮರಾಜನಗರ ಯೋಜನೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಅಗತ್ಯವಿರುವ ಪ್ರದೇಶದಲ್ಲಿ ಸೇವಾ ಮನೋಭಾವವಿರುವ ಸಮಾನ ಮನಸ್ಕರನ್ನು ಸೇರಿಸಿ ನೂತನ ಸಂಸ್ಥೆ ಆರಂಭಿಸಿ ಸಮಾಜದ ಕಡುಬಡವರಿಗೆ ಆರೋಗ್ಯ ಹಾಗೂ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು. ಎರಡು ರಾಜ್ಯದ ಗಡಿಯಲ್ಲಿರುವ ಗುಂಡ್ಲುಪೇಟೆಯಲ್ಲಿ ಸಂಸ್ಥೆಯ ಸೇವೆ ಅತ್ಯಗತ್ಯವಾಗಿ ಬೇಕಾಗಿದೆ. ಈ ಬಗ್ಗೆ ಸಮಾನ ಮನಸ್ಕರು ಒಗ್ಗೂಡಿ ತಮ್ಮ ಸೇವಾ ಚಟುವಟಿಕೆಗಳನ್ನು ನಡೆಸಬೇಕು. ಜಿಲ್ಲಾ ಹಾಗೂ ಪ್ರಾಂತ್ಯದ ಮಟ್ಟದಲ್ಲಿ ಇದಕ್ಕೆ ಅಗತ್ಯವಾದ ನೆರವು ನೀಡಲಾಗುತ್ತದೆ ಎಂದು ಹೇಳಿದರು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರನ್ನು ಭೇಟಿ ಮಾಡಿ ಸಂಸ್ಥೆಯ ಚಟುವಟಿಕೆಗೆ ನೆರವು ಕೋರಲಾಯಿತು. ತಾವೂ ಸದಸ್ಯರಾಗುವ ಮೂಲಕ ಎಲ್ಲ ರೀತಿಯ ನೆರವು ನೀಡುವುದಾಗಿ ಗಣೇಶ ಪ್ರಸಾದ್ ಭರವಸೆ ನೀಡಿದರು.

ಮಾಜಿ ಪ್ರಾಂತಪಾಲ ಎಂ.ಎನ್.ಜಯಪ್ರಕಾಶ, ಮಾಜಿ ಖಜಾಂಚಿ ಮತಿದೇವಕುಮಾರ್, ಮಾಜಿ ಅಧ್ಯಕ್ಷ ಎಂ.ಸಿ.ಶಿವಪ್ರಸಾದ್, ಕೆ.ಎನ್.ಮಹದೇವಸ್ವಾಮಿ, ನಿತಿನ್ ಮೆಹ್ತಾ. ಮಾಜಿ ಕಾರ್ಯದರ್ಶಿ ಶಂಕರನಾರಾಯಣ ಜೋಯಿಸ್, ಎಂ.ಶ್ರೀನಾಥ್, ಎಸ್. ಎಂ.ಮಲ್ಲಿಕಾರ್ಜುನ, ರಾಘು, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net