ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ

17SPT3
ಸೋಮವಾರಪೇಟೆ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾ ಮಂಡಳಿ ಸಂಘಟನೆಯ ವಾರ್ಷಿಕೋತ್ಸವದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಜಯಂತಿ, ಶೀಲಾ, ಪವಿತ್ರಾ, ಸುಮತಿ ಇದ್ದರು.
Published on

ಸೋಮವಾರಪೇಟೆ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾಮಂಡಳಿ (ಟಿಯುಸಿಸಿ) ಸಂಘಟನೆಯ 2024-25ನೇ ಸಾಲಿನ ವಾರ್ಷಿಕ ಸಮಾರಂಭ ಸ್ಥಳೀಯ ಸ್ತ್ರೀಶಕ್ತಿ ಭವನದಲ್ಲಿ ಸಂಘಟನೆ ಅಧ್ಯಕ್ಷೆ ಧನಲಕ್ಷ್ಮೀ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳ ಅಂಗನವಾಡಿಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವುದರಿಂದ, ಆ ಭಾಗದ ತಾಯಂದಿರು ಮತ್ತು ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ. ಅವರ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು. ಸರ್ಕಾರಗಳು ಕೂಡ ಅಂಗನವಾಡಿ ಕಾರ್ಯಕರ್ತರಿಗೆ ದುಡಿಮೆಗೆ ತಕ್ಕದಾಗಿ ವೇತನ ಮತ್ತು ಅವಶ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ ಮಾತನಾಡಿ, ಬೆಳಗ್ಗಿನಿಂದಲೂ ಸಂಜೆಯ ತನಕ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದರೊಂದಿಗೆ, ಮಾತೃವಂದನ, ಭಾಗ್ಯಲಕ್ಷ್ಮಿ, ಬಿಎಲ್‌ಒ ಸೇರಿದಂತೆ ಇನ್ನಿತರ ಹೆಚ್ಚವರಿ ಕೆಲಸಗಳನ್ನೂ ಮಾಡಬೇಕಿದೆ. ಅವರ ಭಾಗದ ಗರ್ಭಿಣಿಯರ ಆರೋಗ್ಯ ಮತ್ತು ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ಸೇರಿದಂತೆ ಬಿಡುವಿಲ್ಲದ ಕೆಲಸ ಮಾಡುತ್ತಾರೆ. ಇಂತಹವರ ಸಮಾಜಮುಖಿ ಕೆಲಸವನ್ನು ನಾಗರಿಕ ಸಮಾಜ ಗೌರವಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷೆ ಪವಿತ್ರಾ, ಕ್ಷೇಮ ನಿಧಿ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷೆ ಜಯ, ಪ್ರಧಾನ ಕಾರ್ಯದರ್ಶಿ ತಾರಾ ಲೋಬೊ, ಖಜಾಂಚಿ ಗೀತಾ ಇದ್ದರು.

ನಂತರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯೆ ಶೀಲಾ ಡಿಸೋಜ, ಅಂಗನವಾಡಿ ಕಾರ್ಯಕರ್ತೆಯಾರದ ಪಲಿತಾ, ಲೀಲಾ, ಮೀನಾಕ್ಷಿ, ಚಂದ್ರಿಕಾ, ಜಯಲಲಿತಾ, ಸುಮಾಮಣಿ, ಭಾನುಮತಿ ಹಾಗೂ ಸಹಾಯಕಿರಾದ ರೇಣುಕಾ, ಯಾಸ್ಮಿನ್, ಮೋಹಿನಿ, ಜಯ ಪಳನಿ, ಸರಸ್ವತಿ, ಶಾಂತಾ, ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net