ರುದ್ರರೂಪ ತೋರಿದ ಸಮುದ್ರ, ಅಂಗಡಿ- ಮುಗ್ಗಟ್ಟುಗಳು ನೀರು ಪಾಲು

22gkn2- beach damage
Published on

ಗೋಕರ್ಣ:

ಗುರುವಾರ ಸಂಜೆ ಇಲ್ಲಿನ ಮೇನ್​ಬೀಚ್ ಬಳಿಯ ಬಿಜ್ಜೂರು ತೀರದಲ್ಲಿ ಸಮುದ್ರ ಭರತದ ವೇಳೆ ಏಕಾಏಕಿ ಭಾರಿ ಅಲೆಗಳು ನುಗ್ಗಿ ರೆಸ್ಟೋರೆಂಟ್ ಮತ್ತು ಪ್ರವಾಸಿಗರ ವಸತಿಗಾಗಿ ನಿರ್ವಿುಸಿದ್ದ ಕೆಲ ರೂಮ್ಳು ಕೊಚ್ಚಿ ಹೋದ ಘಟನೆ ನಡೆದಿದೆ.


ಬುಧವಾರ ಉಬ್ಬರದ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮುಂದೆ ಬಂದಿದ್ದ ಸಮುದ್ರ, ಗುರುವಾರ ತನ್ನ ರುದ್ರರೂಪ ತೋರಿದೆ. ಇದರಿಂದ ಎರಡು ರೆಸ್ಟೋರೆಂಟ್ ಅಲೆಗೆ ಕೊಚ್ಚಿಹೋಗಿ ಸಂಪೂರ್ಣ ನಾಶವಾಗಿವೆ. ಇನ್ನೆರಡು ಅಂಗಡಿಗಳು ಭಾಗಶಃ ನಷ್ಟವಾಗಿವೆ. ಇದರ ಜತೆಗೆ ಪ್ರವಾಸಿಗರಿಗಾಗಿ ಕಟ್ಟಿದ್ದ ಕೆಲವು ಕೊಠಡಿಗಳಿಗೂ ತೀವ್ರ ಹಾನಿಯುಂಟಾಗಿದೆ.

ಪ್ರವಾಸಿಗರ ವಾರ್ಷಿಕ ಸೀಸನ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಗ್ರಾಹಕರು ಇರಲಿಲ್ಲ ಎನ್ನಲಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ಉಂಟಾದ ಸಮುದ್ರ ನುಗ್ಗುವಿಕೆಯ ಈ ಅನಾಹುತ ಇದೇ ಬಗೆಯಲ್ಲಿ ಮುಂದುವರಿದಲ್ಲಿ ಹಾನಿಯ ಪ್ರಮಾಣ ಹೆಚ್ಚಾಗುವ ಅಪಾಯ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net