ಫಲಕ ಹರಿದು ಹಾಕಿದ ಕಿಡಿಗೇಡಿಗಳು

16.npk-.B
Published on

ನಾಪೋಕ್ಲು: ಪವಿತ್ರ ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಕಿದ್ದ ಸುಸ್ವಾಗತ ಮತ್ತು ಶುಭಕೋರುವ ಫಲಕವನ್ನು ಬುಧವಾರ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಕುಶಾಲನಗರದಿಂದ ತಲಕಾವೇರಿವರೆಗೆ 80 ಫಲಕಗಳನ್ನು ಹಾಕಲಾಗಿತ್ತು. ಕಾರುಗುಂದ ಮತ್ತು ಬಕ್ಕ ಸೇರಿದಂತೆ ಕೆಲವು ಕಡೆ ಈ ಫಲಕಗಳನ್ನು ಕಿಡಿಗೇರಿಗಳು ಹರಿದು ಹಾಕಿದ್ದಾರೆ. ಈ ಸಂಬಂಧ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪ್ರಮುಖರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net