ರಾಮಾಯಣದ ರಾಜಧರ್ಮ ಇಂದಿಗೂ ಅನುಕರಣೀಯ

blm (3)
Published on

ಕಾರ್ಕಳ: ಕೌಟುಂಬಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಪರಿಕಲ್ಪನೆಯಲ್ಲಿಯೂ ಮಿಳಿತಗೊಂಡಿರುವ ಭಾವನಾತ್ಮಕ ಸಂಬಂಧಗಳ ನವಿರಾದ ವಿವರಣೆಗಳನ್ನು ರಾಮಾಯಣದಲ್ಲಿ ಕಾಣಬಹುದಾಗಿದೆ. ರಾಜನಾದವನು ಪಾಲಿಸಬೇಕಾದ ರಾಜ ಧರ್ಮದ ಬಗ್ಗೆಯೂ ರಾಮನು ಭರತನಿಗೆ ಬೋಧಿಸುತ್ತಾನೆ. ರಾಜಧರ್ಮದ ಈ ವಿವರಣೆಗಳು ಇಂದಿನ ರಾಜಕಾರಣಿಗಳಿಗೂ ಅನುಕರಣೆಗೆ ಅತ್ಯಂತ ಯೋಗ್ಯವಾದುದಾಗಿದೆ ಎಂದು ವಿದ್ವಾಂಸ ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಹೇಳಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಸಹಭಾಗಿತ್ವದಲ್ಲಿ ಪ್ರತೀ ತಿಂಗಳು ನಡೆಯುವ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲಿಕೆಯ ‘ಅಷ್ಟಮ ಸೋಪಾನ ಶ್ರೀರಾಮ ಸಮಾಗಮ’ ಎಂಬ ವಿಷಯದ ಕುರಿತು ಶನಿವಾರ ಕಾರ್ಕಳದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ, ಅಖಿಲ ಭಾರತ ಸಾಹಿತ್ಯ ಪರಿಷದ್ ಗೌರವಾಧ್ಯಕ್ಷ ನಿತ್ಯಾನಂದ ಪೈ, ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ಡಾ.ಸುಮತಿ ಪಿ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಸುಲೋಚನಾ ಬಿ.ವಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net