ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ

The role of teachers in shaping the future of children is immense
ಹುನಗುಂದ ವಿಜಯ ಮಹಾಂತೇಶ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು
Published on

ಹುನಗುಂದ : ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.

ಪಟ್ಟಣದ ಎಂ.ಆರ್. ಗಾರ್ಡನ್‌ನಲ್ಲಿ ವಿಜಯ ಮಹಾಂತೇಶ ಪ್ರೌಢಶಾಲೆಯ 1990-91ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಬದುಕು ಬೆಳಗುವುದು ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯ. ಗುರುವಿನಿಂದ ಶಾಲೆಯಲ್ಲಿ ಪೆಟ್ಟು ತಿಂದವನು ಕೆಟ್ಟ ಮಾರ್ಗಕ್ಕೆ ಒಳಗಾಗುವುದಿಲ್ಲ. ಆದ್ದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಶಿಕ್ಷಕ ಇರದೆ ಇದ್ದರೆ ಸಮಾಜದಲ್ಲಿ ಬದುಕು ಅಸಾಧ್ಯ ಎಂದರು.

ವಿ.ಮ. ಶಾಲೆಯ ಆಡಳಿತಾಧಿಕಾರಿ ಶಶಿಕಲಾ ಎನ್. ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಬೆಳವಣಿಗೆ ಹೊಂದಿ ಉನ್ನತ ಹುದ್ದೆ ಅಲಂಕರಿಸಿದಾಗ ಶಿಕ್ಷಕರಿಗೆ ಆನಂದವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.

ವಿ.ಮ.ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಎಂ.ಎನ್. ತೆನಹಳ್ಳಿ ಮಾತನಾಡಿ, ಜನ್ಮ ನೀಡಿದ ತಾಯಿ-ತಂದೆ ಹಾಗೂ ಶಿಕ್ಷಣ ನೀಡಿದ ಶಿಕ್ಷಕರನ್ನು ಎಂದೂ ಮರೆಯಬಾರದು ಎಂದರು.

ನಿವೃತ್ತ ಮುಖ್ಯಶಿಕ್ಷಕರಾದ ಎ.ಒ. ಬಿರಾದಾರ, ವಿ.ವಿ. ಪತ್ತಾರ, ಶಿಕ್ಷಕರಾದ ಬಿ.ಸಿ. ಪಾಟೀಲ, ಎಸ್.ಎಸ್. ದರಗಾದ, ಬಿ.ಸಿ. ಅಂಗಡಿ, ಎಸ್.ಬಿ. ಕುಲಕರ್ಣಿ, ಎಸ್.ವಿ. ಹಾಸಲಕರ, ಬಿ.ಎಂ.ಲೈನದ, ದೊಡ್ಡಬಸಪ್ಪ ಬಿ., ಎಂ.ಎಂ. ತುಂಬಲಗಡಿ, ಎಸ್.ಎಸ್. ಬಳೂಟಗಿ, ಜೆ.ಕೆ. ಭೂಸಾರಿ, ಎಸ್.ಎಸ್. ಹೊನವಾಡ, ಎಸ್.ಕೆ. ಕೊನೆಸಾಗರ, ಸಂಗು ಮಠ, ಬಸವರಾಜ ಯಡಹಳ್ಳಿ, ಎಸ್.ಎಂ. ಮೀರಾಕೂರ, ಅರುಣಾ ಅಕ್ಕಿ, ವಿ.ಮ. ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಎಸ್. ಬನ್ನಟ್ಟಿ ಉಪಸ್ಥಿತರಿದ್ದರು.

ಹಳೆಯ ವಿದ್ಯಾರ್ಥಿಗಳಾದ ನೀಲಪ್ಪ ತಪೇಲಿ, ಅಪ್ಪು ಆಲೂರ, ರಾಜು ಅಮರಾವತಿ, ವಿರೇಶ ಪಾಟೀಲ, ಮುದಿಯಪ್ಪ ಚಿತ್ತವಾಡಗಿ, ಹುಸೇನ ಸಂದಿಮನಿ, ರಾಜು ಹುನಗುಂದ, ಶರಣಪ್ಪ ಅಮರಾವತಿ, ವಿಜಯಕುಮಾರ ಬಾದವಾಡಗಿ, ಮುತ್ತು ಬಂಗಾರಿ, ಮಹಾಂತೇಶ ಘಟ್ಟಿಗನೂರ, ಮುತ್ತು ದರಗಾದ, ಮುತ್ತು ಕಂಠಿ, ಶಂಕ್ರಪ್ಪ ತಾಳಿಕೋಟಿ, ಅನಂತ ಪತ್ತಾರ, ಶಾಂತಾ ಗಂಗೂರ, ನೀಲಮ್ಮ ಐಹೋಳೆ, ಗೌರಮ್ಮ ವಾಲಿ, ಸಾವಿತ್ರಿ ಆಲದಿ, ಕುಸುಮಾ ಜಾಲರಡ್ಡಿ, ಭಾರತಿ ಹುನಸಿಗಿಡದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net