ಸಿ.ಕೆ. ಚಿಂಚಲಿ ಶಾಲೆಗೆ ಸಮಗ್ರ ವೀರಾಗ್ರಣಿ

Games
ಮಹಾಲಿಂಗಪುರದಲ್ಲಿ ನಡೆದ ಕ್ಲಸ್ಟರ್‌ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡ ಸಿ.ಕೆ.ಚಿಂಚಲಿ ಶಾಲೆ ವಿದ್ಯಾರ್ಥಿಗಳ ಜತೆಗೆ ಶಿಕ್ಷಕರು ಇದ್ದಾರೆ.
Published on

ಮಹಾಲಿಂಗಪುರ: ಪಟ್ಟಣದ ನ್ಯೂ ಮಿಲೆನಿಯಂ ಎಜ್ಯುಕೇಶನ್ ಸೊಸೈಟಿಯ ಸಿ ಕೆ. ಚಿಂಚಲಿ ಪ್ರಾಥಮಿಕ ಶಾಲೆ ಕ್ಲಸ್ಟರ್‌ಮಟ್ಟದ ಕ್ರೀಡಾಕೂಟದಲ್ಲಿ ಸತತವಾಗಿ 14ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದೆ.

ಸ್ಥಳೀಯ ಎಸ್‌ಸಿಪಿಎಂಪಿಎಸ್ ಶಾಲೆ ಆವರಣದಲ್ಲಿ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಒಟ್ಟು 24 ಶಾಲೆಗಳು ಭಾಗವಹಿಸಿದ್ದವು.

ಬಾಲಕರ ವಿಭಾಗದಲ್ಲಿ ಸಿ.ಕೆ.ಚಿಂಚಲಿ ಶಾಲೆ ವಿದ್ಯಾರ್ಥಿಗಳು 80 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಹಾಗೂ ದ್ವಿತೀಯ, ಕಬಡ್ಡಿ, ಥ್ರೋಬಾಲ್, ಚಕ್ರ ಎಸೆತದಲ್ಲಿ ಪ್ರಥಮ, ವಾಲಿಬಾಲ್, ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ರಿಲೆ ಮತ್ತು 200 ಮೀಟರ್ ಓಟದಲ್ಲಿ ಪ್ರಥಮ, ವಾಲಿಬಾಲ್, ಖೋಖೋದಲ್ಲಿ ದ್ವಿತೀಯ ಹಾಗೂ 600 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಸಿದ್ದು ಚಿಂಚಲಿ, ಕಾರ್ಯದರ್ಶಿ ಮಹಾಂತೇಶ ಚಿಂಚಲಿ, ಮುಖ್ಯಶಿಕ್ಷಕ ಸುರೇಶ ಗೊರಬಾಳ, ದೈಹಿಕ ಶಿಕ್ಷಕ ರಾಮಚಂದ್ರ ಮೇತ್ರಿ, ಪೂಜಾ ಸಂಬಾಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net