ಸಮಾಜ ಸುಧಾರಣೆಯಲ್ಲಿ ಮಠಗಳ ಪಾತ್ರ ಹಿರಿದು

ಮುದಗಲ್ ಸಮೀಪದ ತಿಮ್ಮಾಪುರದ ಶ್ರೀ ಮಹಾಂತೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಜನಮನ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿದರು. ಸಿದ್ದಯ್ಯಕೋಟೆಯ ಶ್ರೀಗಳು, ಬಸವಲಿಂಗ ಸ್ವಾಮೀಜಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಹಾಂತ ಸ್ವಾಮೀಜಿ ಇತರರಿದ್ದರು.
ಮುದಗಲ್ ಸಮೀಪದ ತಿಮ್ಮಾಪುರದ ಶ್ರೀ ಮಹಾಂತೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಜನಮನ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿದರು. ಸಿದ್ದಯ್ಯಕೋಟೆಯ ಶ್ರೀಗಳು, ಬಸವಲಿಂಗ ಸ್ವಾಮೀಜಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಹಾಂತ ಸ್ವಾಮೀಜಿ ಇತರರಿದ್ದರು.
Published on

ಮುದಗಲ್: ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಾರ್ವಜನಿಕರನ್ನು ಪರಿವರ್ತಿಸುವಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಗುಳೇದಗುಡ್ಡದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ತಿಮ್ಮಾಪುರ ಗ್ರಾಮದ ಮಹಾಂತೇಶ್ವರ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಮನ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಅನುದಾನ ಕೊರತೆಯಿಂದ ಭಕ್ತರ ಅಗತ್ಯ ಸಹಕಾರದಿಂದ ಮಠಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮಹಾಂತ ಶ್ರೀಗಳು ಪ್ರವಚನದ ಮೂಲಕ ಜನರನ್ನು ಉತ್ತಮದಾರಿಗೆ ತರುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ. ಯುವಕರು ವ್ಯಸನ ಮುಕ್ತರಾಗಬೇಕು. ಸಮಾಜ ಸುಧಾರಣೆಗಾಗಿ ಮಠ ಮಾನ್ಯಗಳು ಸಾಕಷ್ಟು ಶ್ರಮಿಸುತ್ತಿವೆ ಎಂದರು.

ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಮಕ್ಕಳು ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ವಿವಾಹಕ್ಕೆ ದುಂದು ವೆಚ್ಚ ಮಾಡದೆ ಮಕ್ಕಳ ಶೈಕ್ಷಣಿಕ ಕಾರ್ಯಕ್ಕೆ ತೆಗೆದಿಡಬೇಕು. ಸಮಾಜದ ಏಳಿಗೆಗೆ ಶ್ರೀಗಳು ಸೇವಾ ಮನೋಭಾವದಿಂದ ಜೀವಿಸಬೇಕು ಎಂದು ತಿಳಿಸಿದರು. ಶಿಕ್ಷಣ ಹಾಗೂ ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಶ್ರೀಮಠದ ಪೀಠಾಧಿಪತಿ ಮಹಾಂತ ಸ್ವಾಮೀಜಿ ಸಾಲಿಮಠ, ಪ್ರಮುಖರಾದ ಶರಣಬಸವ ವ್ಯಾಕರನಾಳ, ಸುರೇಂದ್ರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಡಾ.ಶಿವಶರಣಪ್ಪ ಇತ್ಲಿ, ಎಚ್.ಬಿ.ಮುರಾರಿ, ಮಲ್ಲಪ್ಪ ಮಾಟೂರ, ವೀರಭದ್ರಪ್ಪ ಜವಳಗೇರಾ, ಮಸ್ಕಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net