ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ

25 anr1 tirupathi
ಆಯನೂರಿನಲ್ಲಿ ವಿಜೃಂಭಣೆಯಿಂದ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವ.
Published on

ಆಯನೂರು: ಶ್ರೀವಾರಿ ೌಂಡೇಶನ್ ನೇತೃತ್ವದಲ್ಲಿ ಆಯನೂರಿನಲ್ಲಿ ಸೋಮವಾರ ಕೋಹಳ್ಳಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಸುತ್ತಲಿನ ಗ್ರಾಮಗಳ ಸಹಕಾರದೊಂದಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಸಂಚರಿಸಿ ವಿನಾಯಕ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಬಂದು ಸೇರಿತು. ಚಾಮುಂಡೇಶ್ವರಿ, ಬಸವೇಶ್ವರ ಮತ್ತು ದುರ್ಗಮ್ಮನ ದೇವಸ್ಥಾನದಿಂದ ಬಂದ ಭಜನಾ ತಂಡಗಳು ವಿನಾಯಕ ವೃತ್ತದಲ್ಲಿ ಉತ್ಸವ ಮೂರ್ತಿಯೊಂದಿಗೆ ಸೇರಿಕೊಂಡವು.

ಮೆರವಣಿಗೆಯಲ್ಲಿ ಮಹಿಳೆಯರ ನೃತ್ಯ, ಶಿವಮೊಗ್ಗದ ಜ್ಞಾನೇಶ್ವರಿ ಮಹಿಳಾ ತಂಡದ ವಾದ್ಯ ಹಾಗೂ ಸ್ಥಳೀಯ ಭಜನಾ ತಂಡದವರಿಂದ ಹಾಡು, ಕೀರ್ತನೆ ಜನಮನ ಸೊರೆಗೊಂಡಿತು.

ಹಣಿಗೆರೆ ರಸ್ತೆಯಲ್ಲಿ ಗ್ರಾಮದ ಮಂಜುನಾಥ ಗೌಡರಿಗೆ ಸೇರಿದ ಜಮೀನಿನಲ್ಲಿ ತಿರುಪತಿ ತಿರುಮಲದಲ್ಲಿರುವಂತೆ ಅದೇ ಮಾದರಿಯ ದೇವಸ್ಥಾನ ರಚನೆ ಮಾಡಲಾಗಿತ್ತು. ಬೃಂದಾವನದಲ್ಲಿರುವಂತೆಯೆ 9 ಅಡಿ ಎತ್ತರದ ಶ್ರೀನಿವಾಸ ದೇವರ ವಿಗ್ರಹ ನಿರ್ಮಾಣ ಮಾಡಲಾಗಿತ್ತು. ಆಗಮ ಶಾಸ್ತ್ರದಂತೆಯೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಜರುಗಿತು.

ಬೆಳಗ್ಗೆ ದೇವರ ಸನ್ನಿಧಿಯಲ್ಲಿ ಸಂಕಲ್ಪ ಮಾಡಿಸಲಾಯಿತು. ನಾನು ತಿರುಪತಿಗೆ ಹೋಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೋಡಲು ಆಗುತ್ತಿರಲಿಲ್ಲ. ನಮ್ಮ ಗ್ರಾಮದಲ್ಲಿಯೇ ಈ ವ್ಯವಸ್ಥೆ ಮಾಡಿದ್ದರಿಂದ ತಿರುಪತಿಗೆ ಹೋಗಿ ಬಂದಷ್ಟು ಸಂತೋಷವಾಗಿದೆ ಎಂದು 70 ವಷರ್ದ ಅನುಸೂಯಮ್ಮ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net