ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಅಪಾರ

FotoJet
Published on

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅನಿಸಿಕೆ | ಕುಡುಮಲಕುಂಟೆ ಜಿಟಿಟಿಸಿಯಲ್ಲಿ ಸರ್‌ಎಂವಿ ದಿನಾಚರಣೆ

ಗೌರಿಬಿದನೂರು : ಬಲಿಷ್ಠ ದೇಶದ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಬಹುಮುಖ್ಯವಾದುದು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ತಾಲೂಕಿನ ಕುಡುಮಲಕುಂಟೆ ಗ್ರಾಮದಲ್ಲಿನ ಜಿಟಿಟಿಸಿ ಕೇಂದ್ರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ವಿಶ್ವೇಶ್ವರಯ್ಯನವರ ಕೊಡುಗೆ ಅವಿಸ್ಮರಣೀಯ. ಇತಿಹಾಸವನ್ನು ಮೆಲುಕು ಹಾಕಿದಾಗ ಅವರ ಸೇವೆಗೆ ಸಂದಿರುವ ಪ್ರಶಸ್ತಿಗಳು, ಕೀರ್ತಿ ನಾಡಿನ ಹೆಮ್ಮೆ. ವಿಶ್ವೇಶ್ವರಯ್ಯನವರಂಥ ಮಹಾನ್ ಸಾಧಕರು, ಅಂತಹ ತಂತ್ರಜ್ಞರು ನಮಗೆ ಇಂದು ಬೇಕಾಗಿದೆ ಎಂದರು.
ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತವೆ. ಹಾಗಾಗಿ ಒತ್ತಡಗಳಲ್ಲೂ ಜವಾಬ್ದಾರಿಯಿಂದ ಕಾರ್ಯ ಯೋಜನೆ ರೂಪಿಸಬೇಕಾಗುತ್ತದೆ ಎಂದರು.
ವಕೀಲ ರಂಗರಾಜು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ ಸೇವೆ ಅಪಾರ. ಈಗ ಎಲ್ಲ ವಿದ್ಯುನ್ಮಾನ ಆವರಿಸಿದೆ. ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು, ಆಕಾಶದೊಂದಿಗೆ ವ್ಯವಹರಿಸುವುದೇ ಇಂಜಿನಿಯರ್‌ಗಳ ಕೆಲಸವಾಗಿದೆ ಎಂದರು.
ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲ ಹರೀಶ್ ಕುಮಾರ್, ಇಂಜಿನಿಯರ್‌ಗಳಾದ ಪ್ರಕಾಶ್, ನಾರಾಯಣಪ್ಪ, ಜಗದೀಶ್, ಗ್ರಾಪಂ ಅಧ್ಯಕ್ಷ ಶಿವಶಂಕರಪ್ಪ, ನಗರಸಭೆ ಸದಸ್ಯ ಜಯರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net