ಸರ್ಕಾರದ ರಚನೆಯಲ್ಲಿ ಪ್ರಜೆಗಳ ಪಾತ್ರ ಮಹತ್ವದ್ದು

blm (7)
Published on

ಶಿರ್ವ: ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು ಸರ್ಕಾರದ ರಚನೆಯಲ್ಲಿ ಪ್ರಜೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಹಂತದಲ್ಲೇ ಸಂಸತ್ತಿನ ರಚನೆ ಮತ್ತು ಕಾರ್ಯ ವಿಧಾನದ ಬಗ್ಗೆ ತಿಳಿದುಕೊಂಡಾಗ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಶಿರ್ವ ಶಾಖೆಯ ಚೀಫ್ ಮ್ಯಾನೇಜರ್ ಜೆನಿಫರ್ ಎಂ. ಹೇಳಿದರು.

ಶಿರ್ವದ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಂಸತ್ತನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭಹಾರೈಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು.

ಶಾಲಾ ಪ್ರಾಂಶುಪಾಲೆ ನೀಶಾ ಶೆಟ್ಟಿ, ವಿದ್ಯಾರ್ಥಿ ನಾಯಕ ರಹೀಷ್ ರಹೀಮ್, ವಿದ್ಯಾರ್ಥಿ ನಾಯಕಿ ಸ್ಮತಿ ಮೊಗಸಾಲೆ ಹಾಗೂ ಮಂತ್ರಿ ಮಂಡಲದ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ನಿಮಿತಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ವಸ್ತಿ ಸ್ವಾಗತಿಸಿದರು. ಪ್ರೇರಣಾ ಪ್ರವೀಣ್ ವಂದಿಸಿದರು. ಬ್ರಾಯನ್ ಮಿನೆಜಸ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net