ಒಕ್ಕಣೆ ಕಣವಾದ ರಸ್ತೆಗಳು!

29 RMN-MGD P2
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ದಾನ್ಯ ಒಕ್ಕಣೆಗೆ ರಸ್ತೆಗಳೇ ಕಣ !

* ಪರದಾಡುತ್ತಿರುವ ಸಾರ್ವಜನಿಕರು, ವಾಹನ ಸವಾರರು

*ಕಣ್ಮರೆಯಾಗುತ್ತಿವೆ ಪೂರ್ವಿಕ ಕಾಲದ ಒಕ್ಕಣೆ ಕಣಗಳು

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ತಾಲೂಕಿನಾದ್ಯಂತ ಇರುವ ರಸ್ತೆಗಳೆ ಒಕ್ಕಣೆ ಕಣವಾಗಿರುವುದರಿಂದ ನಿತ್ಯ ಓಡಾಡುವ ನಾಗರಿಕರಿಗೆ, ವಾಹನ ಸವಾರರು ತೊಂದರೆ ಅನು‘ವಿಸುವಂತಾಗಿದೆ. ರಾಗಿ, ಭತ್ತ, ಹುರುಳಿ, ಸಾಸುವೆ, ಹುಚ್ಚೆಳ್ಳು ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಕಣ ಮಾಡುತ್ತಿದ್ದರು. ಆದರೆ, ವೈಜ್ಞಾನಿಕತೆ ಬೆಳೆದಂತೆ ರೈತರು ರಸ್ತೆಗಳನ್ನೆ ಕಣಗಳನ್ನಾಗಿಸಿಕೊಂಡು ಒಕ್ಕಣೆ ಮಾಡುತ್ತಿದ್ದಾರೆ.

ಹೆಚ್ಚು ವಾಹನಗಳು ಓಡಾಡುವ ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ಬೈಕ್ ಸವಾರರ ಪ್ರಾಣಕ್ಕೆ ಕುತ್ತಾಗಿದ್ದು, ಹೆಚ್ಚು ಅಪಘಾತಗಳು ನಡೆಯುತ್ತಿದೆ. ಸವಾರರ ಕಣ್ಣಿಗೆ ‘ಧೂಳು ಬಿದ್ದು ಗಾಯಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ಸಣ್ಣ ಪ್ರಮಾಣದಲ್ಲಿ ಹಾಕದೆ ಎತ್ತರವಾಗಿ ಹಾಕುವುದರಿಂದ ದ್ವಿಚಕ್ರ ಮತ್ತು ಕಾರುಗಳ ಎಂಜಿನ್‌ಗಳಿಗೆ ಸುತ್ತಿಕೊಂಡು ವಾಹನಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದು ಬೆಂಕಿ ಹತ್ತಿಕೊಂಡಿರುವ ಘಟನೆಗಳು ನಡೆಯುತ್ತಿವೆ.

ಟ್ಯಾಕ್ಟರ್, ಎತ್ತಿನ ಮೂಲಕ ಬೃಹತ್ ಕಲ್ಲನ್ನು ಎಳೆದು ಒಕ್ಕಣೆ ಮಾಡಲು ಹೆಚ್ಚು ಹಣ ಖರ್ಚು, ಎತ್ತುಗಳ ಸಮಸ್ಯೆ ಹಾಗೂ ಕೂಲಿ ದುಪ್ಪಟ್ಟಿನಿಂದಾಗಿ ಕಾರ್ಮಿಕರ ಸಮಸ್ಯೆಯಿಂದಾಗಿ ರಸ್ತೆಗಳೆ ಕಣಗಳಾಗಿ ಪರಿವರ್ತನೆಯಾಗಿದೆ. ಅಲ್ಲದೆ, ‘ಧಾನ್ಯಗಳನ್ನು ಬೇಗ ಮನೆಗೆ ತರಬಹುದು ಎಂಬ ಮಾತು ರಸ್ತೆಯಲ್ಲಿ ಒಕ್ಕಣೆಮಾಡುವವರ ವಾದವಾಗಿದೆ.

ನರೇಗಾ ಯೋಜನೆಯಡಿ ಕಣಮಾಡಿಕೊಳ್ಳಲು ಅನುದಾನ ಇದೆ. ಈ ಅನುದಾನದಿಂದ ಸಾಕಷ್ಟು ರೈತರು ಕಣ ನಿರ್ಮಿಸಿಕೊಂಡಿದ್ದರೂ ಇದನ್ನು ಉಪಯೋಗಿಸಿಕೊಳ್ಳದೇ ರಸ್ತೆಗಳನ್ನೇ ಅವಲಂಬಿಸಿಕೊಂಡಿದ್ದಾರೆ.

ಕಣ್ಮರೆಯಾಗುತ್ತಿರುವ ಒಕ್ಕಣೆ ಕಣ

ಪೂರ್ವಿಕರ ಕಾಲದಿಂದ ನಡೆದುಕೊಂಡು ಬಂದ ಒಕ್ಕಣೆ ಕಣ ಕಣ್ಮರೆಯಾಗುತ್ತಿದ್ದು, ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾದ ಕೆಲಸ ಸಂಬಂ‘ಪಟ್ಟ ಇಲಾಖೆ ಮಾಡಬೇಕು. ಎಷ್ಟೇ ವೈಜ್ಞಾನಿಕತೆ ಬೆಳೆದರೂ ಹಳ್ಳಿಯ ಸೊಗಡು ಹಿರಿಯರ ಕಟ್ಟುಪಾಡುಗಳನ್ನು ನಿಲ್ಲಿಸಿದರೆ ನಮ್ಮ ನೆಲದ ಸಂಸ್ಕೃತಿಗೆ ಮರೆಯುವಂತಾಗುತ್ತದೆ. ಹಳೆಯ ಪದ್ಧತಿಯನ್ನು ಅಳವಡಿಸಿಕೊಂಡು ಒಕ್ಕಣೆ ಮಾಡಿದರೆ ‘ಧಾನ್ಯಗಳಲ್ಲಿ ಯಾವುದೇ ಕಲ್ಲು, ಮಣ್ಣು ಶೇಖರಣೆಯಾಗುತ್ತಿರಲಿಲ್ಲ. ಆದರೆ, ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನಗಳ ‘ಧೂಳು, ಆಯಲ್ ಇತರೆ ತ್ಯಾಜ್ಯಗಳು ಧಾನ್ಯಗಳಿಗೆ ಶೇಖರಣೆಯಾಗುತ್ತಿದೆ. ಇದು ದೊಡ್ಡ ಅಪಾಯಕಾರಿ ಎಂಬುದು ರೈತರ ಅನಿಸಿಕೆಯಾಗಿದೆ.

ಜಾಗೃತಿ ಅನಿವಾರ್ಯ

ರಸ್ತೆಗಳಲ್ಲಿ ಒಕ್ಕಣೆ ಮಾಡಿದರೆ ವಾಹನ ಸವಾರರಿಗೆ ಮತ್ತು ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿದರೆ ರಸ್ತೆಗಳಲ್ಲಿನ ಒಕ್ಕಣೆಕಾರ್ಯವನ್ನು ತಡೆಗಟ್ಟಲು ಸಾಧ್ಯ.

ಪೂರ್ವಿಕರು ಸಾಂಪ್ರದಾಯಿಕ ಕಣಮಾಡಿ ಪೂಜೆ ಮಾಡಿ ತಾವು ಬೆಳೆದ ಬೆಳೆಗಳನ್ನು ಒಕ್ಕಣೆಮಾಡುತ್ತಿದ್ದರು. ಇಂದು ಕೆಲ ಸೋಂಬೇರಿಗಳು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಕಣದಲ್ಲಿ ಒಕ್ಕಣೆಮಾಡದೆ ರಸ್ತೆಯಲ್ಲಿ ಹಾಕಿ ಕಲ್ಲು, ಮಣ್ಣು ಮಿಶ್ರಿತ ಆಹಾರ ಸೇವಿಸುತ್ತಿದ್ದಾರೆ. ಇದನ್ನು ಕೈಬಿಟ್ಟು ಸಾಂಪ್ರದಾಯಕ ಒಕ್ಕಣೆಗೆ ಮುಂದಾಗಿ ನಮ್ಮ ಒಕ್ಕಣೆ ಸಂಸ್ಕೃತಿ ಉಳಿಸಬೇಕು.ಲೋಕೇಶ್, ತಾಲೂಕು ರೈತಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net