ಅಭ್ಯರ್ಥಿ ಗೆಲ್ಲಿಸುವ ಜವಬ್ದಾರಿ ಎಲ್ಲರ ಮೇಲಿದೆ

ಅಭ್ಯರ್ಥಿ ಗೆಲ್ಲಿಸುವ ಜವಬ್ದಾರಿ ಎಲ್ಲರ ಮೇಲಿದೆ
Published on

ಎಚ್.ಡಿ. ಕೋಟೆ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ರಾಜ್ಯ ಬಿಜೆಪಿ ಎಸ್‌ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ ಹೇಳಿದರು.

ಪಟ್ಟಣದ ಜೈನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿಯ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 30 ವರ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಲೇ ಬರುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಇದಕ್ಕೆ ವಿರಾಮ ಹಾಕಬೇಕಿದೆ ಎಂದರು.

ಮೈಸೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ್‌ಕುಮಾರ್ ಮಾತನಾಡಿ, ಭಾರತವಲ್ಲದೇ ಇಡೀ ವಿಶ್ವವೇ ಮೋದಿ ಅಧಿಕಾರ ಹಿಡಿಯುವುದನ್ನು ಎದುರು ನೋಡುತ್ತಿದೆ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಎಲ್ಲರು ಮತ ನೀಡಬೇಕು ಎಂದು ಹೇಳಿದರು.

ಹಂಚೀಪುರ ಗುರುಸ್ವಾಮಿ, ನೂತನ ಅಧ್ಯಕ್ಷ ಶಂಭೇಗೌಡ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ್, ಮಂಜುನಾಥ್, ನಟರಾಜು, ಎಸ್‌ಟಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ನಾಗೇಶ್, ನಂದೀಶ್, ಸೋಮಾಚಾರ್, ಚನ್ನಪ್ಪ, ವಿವೇಕಾನಂದ, ಕಚೇರಿ ಕಾರ್ಯದರ್ಶಿ ಚಂದ್ರಮೌಳಿ, ಎಸ್.ಸಿ.ಮೋರ್ಚಾ ನಿಕಟಪೂರ್ವ ಅಧ್ಯಕ್ಷ ರಾಜು, ಸತೀಶ್, ಗೋಕುಲ್, ಗಣಪತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net