ಶರಣರ ಉಪದೇಶದಿಂದ ನೆಮ್ಮದಿ

26Mamadapur1
Published on

ಮಮದಾಪುರ: ಶ್ರಾವಣ ಮಾಸ ನಿಮಿತ್ತ ದೇವಸ್ಥಾನಗಳಲ್ಲಿ ಹಮ್ಮಿಕೊಳ್ಳುವ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಶರಣರು ನೀಡುವ ಉಪದೇಶ ಅಳವಡಿಸಿಕೊಂಡರೆ ನೆಮ್ಮದಿ ಜೀವನ ಕಟ್ಟಿಕೊಳ್ಳಬಹುದೆಂದು ಸ್ಥಳಿಯ ಶಾಂತಾರೂಢ ಸ್ವಾಮೀಜಿ ಹೇಳಿದರು. ಗ್ರಾಮದ ಏಳುಕೋಣೆ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸ ಪ್ರಯುಕ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಗುಡ್ಡಾಪುರ ದಾನಮ್ಮದೇವಿ ಜೀವನ ಚರಿತ್ರೆಯ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಮಂಗಳೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚರಮೂರ್ತೀಶ್ವರ ಸ್ವಾಮೀಜಿ ಮಾತನಾಡಿದರು. ಬಳಿಕ ಶಾಂತಾರೂಢ ಶ್ರೀಗಳನ್ನು ಹಾಗೂ ದಾನಿಗಳನ್ನು ಸತ್ಕರಿಸಲಾಯಿತು. ವೀರಭದ್ರಯ್ಯ ಹಿರೇಮಠ, ಬಸವಂತಪ್ಪ ಪಾವಟೆ, ಅರ್ಚಕರಾದ ಈರಪ್ಪ ಹೂಗಾರ, ಬಸವರಾಜ ಹೂಗಾರ, ಶಿವಲಿಂಗಪ್ಪ ಪಟಗುಂದಿ, ಈರಣ್ಣ ಕಮತ, ಶ್ರೀಶೆಲ ಬನ್ನೂರ, ದೀಪಕ ಕಡಕೋಳ, ಚಂದ್ರಯ್ಯ ಕಂಬಿ, ಅಶೋಕ ಸನಶೆಟ್ಟಿ ಇತರರಿದ್ದರು. ಅಶೋಕ ತೋಟಗಿ ನಿರೂಪಿಸಿದರು. ಶಂಕರ ಕೋಲಾಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net