ಕಾರ್ತಿಕ್ ಗೆಲುವಿನ ಹಿಂದೆ ಇದ್ದಾಳೆ ಈಕೆ; ಈ ಮಹಿಳೆಗೂ ಬಿಗ್​ಬಾಸ್​ ವಿನ್ನರ್​ಗೂ ಇದೆ ಸಂಬಂಧ

Karthik Mahesh
Published on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಚಾಂಪಿಯನ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್‌ ರನ್ನರ್‌ ಅಪ್‌ ಸ್ಥಾನಕ್ಕೆ ಪಡೆದುಕೊಂಡಿದ್ದಾರೆ. ಆದರೆ ಕಾರ್ತಿಕ್​​ ವಿನ್ನರ್​ ಆಗಿರುವ ಹಿಂದೆ  ಮಹಿಳೆಯ ಕೃಪಕಟಾಕ್ಷ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆ ಮಹಿಳೆ ಯಾರು ? ಎನ್ನುವ ಪ್ರಶ್ನಗೆ ಉತ್ತರ ಇಲ್ಲಿದೆ.

ಕಾರ್ತಿಕ್​ ಬಿಗ್​ಬಾಸ್​ ವಿಜೇತರಾಗುತ್ತಾರೆ ಎನ್ನುವುದನ್ನು ಯಾರು ಊಹೆ ಕೂಡಾ ಮಾಡಿರಲಿಲ್ಲ. ಸಹ ಸ್ಪರ್ಧಿಗಳಾದ ವಿನಯ್​, ಸಂಗೀತಾ ಅವರು ಬಿಗ್​ಬಾಸ್​ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಬಿಗ್​ಬಾಸ್​ ವೀಕ್ಷಕರಿಗೆ ಹಾಗೂ ಎಲಿಮಿನೇಟ್​ ಆಗಿ ಬಂದಿರುವ  ಸ್ಪರ್ಧಿಗಳಿಗೂ ಇತ್ತು. ಆದರೆ  ಒಂಟಿ ಮನೆಯ ಸ್ಪರ್ಧಿಗಳ ಆಟ ಮೆಚ್ಚಿ ವೋಟ್​ ಮಾಡಿದ ಬಿಗ್​ಬಾಸ್​  ಅಭಿಮಾನಿಗಳ ಲೆಕ್ಕಾಚಾರವೆ ಬೇರೆ ಇತ್ತು. ಬಿಗ್​ಬಾಸ್​​ ವೀಕ್ಷಕರ ವೋಟಿಂಗ್​ ಪ್ರಕಾರ  ಕಾರ್ತಿಕ್​​ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಆಟದ ಲೆಕ್ಕಾಚಾರ ನೋಡಿದ್ರೆ, ಕಾರ್ತಿಕ್ ಚೆನ್ನಾಗಿ ಆಡಿದ್ದಾರೆ. ಪ್ರತಾಪ್ ಆಟದಲ್ಲಿ ವ್ಯತ್ಯಾಸಗಳೇ ಜಾಸ್ತಿ ಇದ್ದವು. ಸಂಗೀತಾ ಮತ್ತು ವಿನಯ್ ಸೂಪರ್ ಆಗಿಯೇ ಆಡಿದ್ದಾರೆ.

ಕಾರ್ತಿಕ್ ಜನರ ಪ್ರೀತಿ ಪಡೆದುಕೊಂಡಿದ್ದಾರೆ. ಜನರಿಂದಲೇ ಗೆದ್ದು ಬಂದಿದ್ದಾರೆ. ತಮ್ಮ ಆಟವನ್ನ ಚೆನ್ನಾಗಿಯೂ ಆಡಿದ್ದಾರೆ. ಹೇಗೆ ಇರಬೇಕೋ ಹಾಗೇನೆ ಮನೆಯೊಳಗೆ ಇದ್ದರು. ನಮೃತಾ, ಸಂಗೀತಾ, ತನಿಷಾ ಜತೆಗೆ ಇರುವ ಗೆಳೆತನದಿಂದ ಕಾರ್ತಿಕ್​​ ಕೆಲವೊಮ್ಮೆ ಕುಗ್ಗಿದ್ದು ಉಂಟು. ಆದ್ರೆ ಅವರ  ಆಟಕ್ಕೆ ಎಲ್ಲಿಯೂ ಸಮಸ್ಯೆ ಮಾಡಿಕೊಂಡಿರಲಿಲ್ಲ.  ಕಾರ್ತಿಕ್​​ ಮನರಂಜನೆ, ಟಾಸ್ಕ್​ ಹಾಗೂ ಮನೆ ಕೆಲಸ, ಸಹ ಸ್ಪರ್ಧಿಗಳ ಜತೆಗೆ ಆತ್ಮೀಯವಾಗಿ ಇದ್ದದ್ದು, ಕೆಲವು ಸಂದರ್ಭದಲ್ಲಿ ನೇರವಾದ ನಡೆ ಕಾರ್ತಿಕ್​ ವಿನ್ನರ್​ ಪಟ್ಟ ಏರಲು ಪ್ಲಸ್​​ ಪಾಯಿಂಟ್​ ಆಯ್ತು.

ಆದರೆ ಬಿಗ್​ಬಾಸ್​​ ಮನೆಯೊಳಗೆ ಇರುವ ಸ್ಪರ್ಧಿಗಳು ಕಾರ್ತಿಕ್​​ ಅವರನ್ನು ಎಲಿಮಿನೇಷನ್​ಗೆ ನಾಮಿನೇಟ್​​ ಮಾಡುತ್ತಿದ್ದರು. ಮತ್ತೆ ಅವರ ನೇರ ನಡೆ ಹಾಗೂ ಟಾಸ್ಕ್​ ಅಂತಾ ಬಂದ್ರೆ ಗೆಳತನಕ್ಕೆ ಯಾವುದೇ ಬೆಲೆ ಕೊಡುವುದಿಲ್ಲ ಎಂದು ಅಸಮಧಾನ ಹೊರಹಾಕುತ್ತಿದ್ದರು. ಕಾರ್ತಿಕ್​​ ಸ್ಟ್ರಾಂಗ್​  ಅವನು ಗೇಮ್​ನಲ್ಲಿದ್ದರೆ ಇವರು ಗೆಲ್ಲು ಸಾಧ್ಯವಾಗುವುದಿಲ್ಲ ಎಂದು ಗೇಮ್​ ಆಡಲು ಕೆಲವೊಮ್ಮೆ ಅವಕಾಶ ಕೊಡುತ್ತಿರಲಿಲ್ಲ. ಇದ್ಯಾವುದಕ್ಕೂ ಕುಗ್ಗದ  ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿಜೇತರಾಗಿದ್ದಾರೆ.  ಬಿಗ್ ಬಾಸ್ ಪ್ರತಾಪ್ ಪಡೆದ ವೋಟ್ಸ್ 2,20,04,202... ಕಾರ್ತಿಕ್ ಮಹೇಶ್ ಪಡೆದ ವೋಟ್ಸ್ 2,98,39,904 ಆಗಿವೆ.  ಈ ಮೂಲಕ ಇಬ್ಬರು ಅಸಮರ್ಥರು ವಿನ್ನರ್ ಮತ್ತು ರನ್ನರ್ ಅಪ್‌ ಆಗಿದ್ದಾರೆ. ಆದರೆ ಇಷ್ಟೊಂದು ವೋಟ್​ ಬರಲು ಕಾರಣ ಒಬ್ಬ ಹೆಣ್ಣುಮಗಳ ಕೃಪಕಟಾಕ್ಷ ಇದೆ ಎನ್ನುವ ಮಾತು ಕೆಳಿ ಬರುತ್ತಿದೆ.

ಬಿಗ್​ಬಾಸ್​​ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಐದು ಆಸೆಗಳ ಪೈಕಿ ಯಾವುದು ಸಾಧ್ಯವಿದೆಯೋ, ಅದನ್ನ ಈಡೇರಿಸುವುದಾಗಿ ‘ಬಿಗ್ ಬಾಸ್‌’ ಮಾತು ಕೊಟ್ಟಿದ್ದರು.  ತಂಗಿ ಜೊತೆ ಮಾತನಾಡಬೇಕು, ಈಗ ಮಾತಾಡಿದ್ರೆ ತುಂಬ ಖುಷಿ ಆಗತ್ತೆ ಎಂದು ಕಾರ್ತಿಕ್‌ ತಮ್ಮ ಮನದಾಳದ ಇಂಗಿತವನ್ನ ವ್ಯಕ್ತಪಡಿಸಿದ್ದರು.

ಬಿಗ್​ಬಾಸ್​ ಕಾರ್ತಿಕ್​​ ಅವರಿಗೆ ತಂಗಿ ಜೊತೆಗೆ ಲೈವ್ ವಿಡಿಯೋ ಕಾಲ್‌ ಮೂಲಕ ಕಾರ್ತಿಕ್‌ ಮಾತುಕತೆ ನಡೆಸುವ ಅವಕಾಶ ಮಾಡಿಕೊಟ್ಟಿದ್ದರು. ಪುಟಾಣಿ ಮಗುವನ್ನೂ ಕಾರ್ತಿಕ್‌ ಕಣ್ತುಂಬಿಕೊಂಡಿದ್ದರು. ಈ ಎಪಿಸೋಡ್​​ ಪ್ರಸಾರವಾಗುತ್ತಿದ್ದಂತೆ ಕಾರ್ತಿಕ್​ ಅವರ ಮೇಲೆ ಇರುವ ಅಭಿಪ್ರಾಯವೇ ವೀಕ್ಷಕರಿಗೆ ಬದಲಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು.  ಕಾರ್ತಿಕ್​ ಅವರ ಮನೆ ಪರಿಸ್ಥಿತಿ ಹಾಗೂ ಅವರ ತಂಗಿ ನೋಡಿದ ವೀಕ್ಷಕರ ಮನಸ್ಸು ಕರಗಿತ್ತು ಅನ್ಸುತ್ತೆ. ಕಾರ್ತಿಕ್​​ ಅವರಿಗೆ ವೋಟ್​​ ಮಾಡುವ ಮೂಲಕವಾಗಿ ಅವರ ಗೆಲುವಿಗೆ ಕಾರಣರಾದ್ರು.

ಕಾರ್ತಿಕ್​ ಗೆಲ್ಲಲು ಕಾರಣ ಈ ಮಹಾಲಕ್ಷ್ಮೀ, ಇವ್ರನ್ನ ಚೆನ್ನಾಗಿ ನೋಡಿಕೊ ಎಂದು ಕೆಲವು ಟ್ರೋಲ್​​ ಪೇಜ್​ಗಳು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿವೆ. ಹೀಗಾಗಿ ಕಾರ್ತಿಕ್​ ಅವರ ಗೆಲುವಿನ ಹಿಂದೆ ಅವರ ಸಹೋದರಿ ಪಾತ್ರ ತುಂಬಾ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಅಂದ್ಹಾಗೆ, ‘ಬಿಗ್ ಬಾಸ್‌’ ಮನೆಯೊಳಗೆ ಕಾರ್ತಿಕ್ ಬಂದಾಗ ತಂಗಿ ತುಂಬು ಗರ್ಭಿಣಿಯಾಗಿದ್ದರು. ತಂಗಿಯ ಸೀಮಂತಕ್ಕೂ ಕಾರ್ತಿಕ್‌ ಹಾಜರಾಗಲು ಆಗಲಿಲ್ಲ. ಕಾರ್ತಿಕ್‌ ‘ಬಿಗ್ ಬಾಸ್‌’ ಮನೆಯಲ್ಲಿ ಲಾಕ್ ಆಗಿದ್ದಾಗಲೇ ಗಂಡು ಮಗುವಿಗೆ ತಂಗಿ ಜನ್ಮ ನೀಡಿದರು.  ಬಾಣಂತಿ ತಂಗಿ ಹಾಗೂ ಮಗುವನ್ನ ನೋಡಿ ಕಾರ್ತಿಕ್‌ ಮಾತನಾಡಿದ್ದೆ ಅವರ ಲಕ್​ ಬದಲಿಸಿತು ಎಂದು ಕಾರ್ತಿಕ್​​ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net